ಟೋಕಿಯೊ ಒಲಂಪಿಕ್ಸ್ – ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತ ಕ್ವಾರ್ಟರ್-ಫೈನಲ್ ಪ್ರವೇಶ – ಸ್ಪೇನ್ ವಿರುದ್ಧ ಪುರುಷರ ಹಾಕಿ ತಂಡಕ್ಕೆ ಜಯ
ಮಹಿಳಾ ಬಾಕ್ಸಿಂಗ್
ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 69ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಭಾರತದ ಲೋವ್ಲಿನಾ ಬೋರ್ಗೊಹೈ ಜರ್ಮನಿಯ ನಾಡಿನ್ ಅಪೆಟ್ಜ್ ಅವರನ್ನು ಸೋಲಿಸಿ ಕ್ವಾರ್ಟರ್-ಫೈನಲ್ ಗೆ ಪ್ರವೇಶಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ 51 ಕೆಜಿ ಫ್ಲೈವೇಟ್ ರೌಂಡ್ನಲ್ಲಿ ಜಯ ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಡೊಮಿನಿಕ್ ಗಣರಾಜ್ಯದ ಮಿಗುಲಿನಾ ಹರ್ನಾಂಡೆಜ್ ಗಾರ್ಸಿಯಾ ಅವರನ್ನು ಎಂ.ಸಿ. ಮೇರಿ ಕೋಮ್ 4-1 ಅಂತರದಿಂದ ಸೋಲಿಸಿದ್ದಾರೆ.

ಪುರುಷರ ಹಾಕಿ ತಂಡ
ಭಾರತೀಯ ಪುರುಷರ ಹಾಕಿ ತಂಡ ಮೂರನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ 3-0 ಅಂತರದಿಂದ ಜಯ ಸಾಧಿಸಿದೆ. ಒಲಿಂಪಿಕ್ಸ್ ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರೀ ಅಂತರದಿಂದ ಸೋಲನುಭವಿಸಿದ್ದ ಭಾರತೀಯ ಹಾಕಿ ತಂಡ ಮೂರನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದೆ.
ವನಿತಾ ಹಾಕಿ ತಂಡ
ಭಾರತೀಯ ವನಿತಾ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಸೋಲಿನಿಂದ ತತ್ತರಿಸಿದೆ. ರಾಣಿ ರಾಮ್ಪಾಲ್ ನೇತೃತ್ವದ ಭಾರತದ ವನಿತಾ ಹಾಕಿ ತಂಡ ಜರ್ಮನಿ ವಿರುದ್ಧ 0-2 ಅಂತರದ ಆಘಾತಕ್ಕೆ ಸಿಲುಕಿದೆ.
ಈಜು
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ಈಜುಪಟು ಸಾಜನ್ ಪ್ರಕಾಶ್ಗೆ ಒಲಿಂಪಿಕ್ ಪದಕ ಕೈ ತಪ್ಪಿದೆ. ಪುರುಷರ ವಿಭಾಗದ 200 ಮೀಟರ್ ಬಟರ್ಫ್ಲೈ ಸೆಮಿಫಿನಾಲೆಯಲ್ಲಿ ಸಾಜನ್ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಏರ್ ರೈಫಲ್
ಭಾರತದ ಏಸ್ ಜೋಡಿ ಮನು ಭಾಕರ್ ಮತ್ತು ಸೌರಭ್ ಚೌಧರಿ 2 ನೇ ಹಂತದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಈವೆಂಟ್ನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಪದಕದ ಆಸೆಯನ್ನು ಕೈ ಚೆಲ್ಲಿದ್ದಾರೆ.
#Tokyo #Olympics #LiveUpdates








