ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಇದೆ..? ಎಲೆಕ್ಟೆಡ್ ಮುಖ್ಯಮಂತ್ರಿಗಳನ್ನೇ ಕಿತ್ತು ಹಾಕಿದ್ದಾರೆ.. ಇದೇನಾ ಡೆಮಾಕ್ರೆಸಿ..? – ಸಿದ್ದರಾಮಯ್ಯ
ಜನ ಕಷ್ಟ ಪಡುತ್ತಿದ್ದಾರೆ, ಬಿಜೆಪಿಯವರು ಕುರ್ಚಿಗೆ ಬಡಿದಾಡುತ್ತಿದ್ದಾರೆ – ಸಿದ್ದರಾಮಯ್ಯ
ಬೆಳಗಾವಿ : ಯಡಿಯೂರಪ್ಪ ಸಿಎಂ ಆದಾಗ ಸಂಪೂರ್ಣ ಮನೆ ಬಿದ್ರೇ ಐದು ಲಕ್ಷ ಕೊಡ್ತೇನಿ ಅಂದ್ರೂ. ಆ ಹಣವನ್ನ ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ರೇ ಒಂದು ಪರಿಹಾರ, ಬಿಜೆಪಿ ಶಾಸಕರಿದ್ರೇ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುಳ್ಳು ಕೇಸ್ ಗಳನ್ನ ಹಾಕುತ್ತಿದ್ದಾರೆ ಅದನ್ನ ಹಾಕದಂತೆ ಎಸ್‌ಪಿ ಗೆ ಹೇಳಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಬೆಳಗಾವಿಯಲ್ಲಿ ಹೇಳಿದ್ದಾರೆ.. ಇದೇ ವೇಳೆ ರಾಜ್ಯ ರಾಜಕೀಯ ಬಿಕ್ಕಟ್ಟು , ಬಜಿಪಿ ಆಂತರಿಕ ಸಮಸ್ಯೆ , ಸಿಎಂ ಬದಲಾವಣೆ ಬೆಳವಣಿಗೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು ಬಿಜೆಪಿಯವರು ಕುರ್ಚಿಗೆ ಬಡಿದಾಡುತ್ತಿದ್ದಾರೆ. ಜನ ಕಷ್ಟ ಪಡುತ್ತಿದ್ದಾರೆ ಅದನ್ನ ಯಾರು ಕೇಳೊರಿಲ್ಲ ಎಂದಿದ್ದಾರೆ.
ಸಂಜೆ ಶಾಸಕಾಂಗ ಪಕ್ಷ ಸಭೆ – ಇಂದೇ ನೂತನ ಸಿಎಂ ಘೋಷಣೆಯಾಗುತ್ತಾ..?
ಅಲ್ಲದೇ ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಇದ್ದೇ ಇರುತ್ತೆ, ಈಗ ಜೆಡಿಎಸ್‌ಗೆ ಯಾವ ಕಮಾಂಡ್ ಇದೆ. ಜೆಡಿಎಸ್ ನಲ್ಲಿ ಇರೋದು ಒಂದೇ ಕಮಾಂಡ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.. ಇದೇ ವೇಳೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯನವರು ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಇದೆ? ಎಲೆಕ್ಟೆಡ್ ಚೀಫ್ ಮಿನಿಸ್ಟರ್ ರನ್ನು ಕೇಂದ್ರ ಸರ್ಕಾರದವರು ತಗೆದು ಎಸೆದಾಕಿ ಬಿಟ್ರು ಕ್ಯಾನ್ ಯು ಕಾಲ್ ಇಟ್ ಅ್ಯಸ್ ಎ ಡೆಮಾಕ್ರಸಿ ಆ್ಯಕ್ಟ್. ಪ್ರಜಾಪ್ರಭುತ್ವ ಸಂವಿಧಾನ ರೀತಿ ಕೆಲಸ ಮಾಡಿರೋದಾ ಇದು?. ಅವರಿಗೆ ಇಷ್ಟ ಬಂದಂಗೆ ಹಾಕ್ತಾರೆ, ಇಷ್ಟ ಬಂದಂಗೆ ಇನ್ನೊಬ್ಬರನ್ನು ತಗೆದುಹಾಕ್ತಾರೆ. ಪ್ರಜಾಪ್ರಭುತ್ವ ಸಂವಿಧಾನದ ರೀತಿಯಲ್ಲಿ ಕೆಲಸ ಆದಂಗ ಇದು. ಯಡಿಯೂರಪ್ಪ ಇದ್ದರೂ ಲಾಭ ಇಲ್ಲ, ಇರದೇ ಇದ್ದರೂ ನಮಗೆ ಲಾಭ ಇಲ್ಲ. 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ದಾರಿ ಸುಗಮವಾಯಿತು ಎಂದಿದ್ದಾರೆ.
ಅಲ್ಲದೇ ನೂರು ಜನ ಸಿದ್ದರಾಮಯ್ಯ ಬಂದ್ರೂ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರವಾಗಿ ಮಾತನಾಡಿ , 2013ರಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ರು ನಾವು ಅಧಿಕಾರಕ್ಕೆ ಬರಲಿಲ್ವಾ?. ಕಾಂಗ್ರೆಸ್ ಪಕ್ಷ 2023ಕ್ಕೆ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ. ಮಿಸ್ಟರ್ ಯಡಿಯೂರಪ್ಪ ಯಾವತ್ತಾದ್ರೂ ನಿಮಗೆ ಮೆಜಾರಿಟಿ ಬಂತಾ. ಸರಳ ಬಹುಮತದಿಂದ ಎಂದಾದರೂ ಆರಿಸಿ ಬಂದಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.