ಟೋಕಿಯೊ ಒಲಿಂಪಿಕ್ಸ್ – 5ನೇ ದಿನ ಭಾರತದ ನಿರಾಶಾದಾಯಕ ಪ್ರದರ್ಶನ
ಮಹಿಳಾ ಹಾಕಿ
ಸತತ ಮೂರನೇ ಸೋಲನ್ನು ಕಂಡಿರುವ ಭಾರತದ ಮಹಿಳಾ ಹಾಕಿ ತಂಡವು ಹಾಲಿ ಚಾಂಪಿಯನ್ ಗ್ರೇಟ್ ಬ್ರಿಟನ್ ವಿರುದ್ಧ 1-4ರಿಂದ ಸೋಲನುಭವಿಸಿತು
ಆರ್ಚರಿ
ಆರ್ಚರ್ ಪ್ರವೀಣ್ ಜಾಧವ್ 1/16 ಎಲಿಮಿನೇಷನ್ಸ್ ಸುತ್ತಿನಲ್ಲಿ ಬ್ರಾಡಿ ಆಲಿಸನ್ ವಿರುದ್ಧ ಸೋತ ನಂತರ ವೈಯಕ್ತಿಕ ಸ್ಪರ್ಧೆಯಿಂದ ಹೊರಬಿದ್ದರು.
ಭಾರತದ ಆರ್ಚರ್ ದೀಪಿಕಾ ಕುಮಾರಿ 32 ನೇ ಸುತ್ತಿನಲ್ಲಿ ಭೂತಾನ್ನ ಕರ್ಮ ವಿರುದ್ಧ ಜಯಗಳಿಸಿದರು ಮತ್ತು ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಕೊನೆಯ 16 ಕ್ಕೆ ಅರ್ಹತೆ ಪಡೆದರು.

ರೋಯಿಂಗ್
ರೋಯಿಂಗ್ನಲ್ಲಿ ಭಾರತದ ಪುರುಷರ ಲೈಟ್ವೇಟ್ ಡಬಲ್ ಸ್ಕಲ್ಸ್ ತಂಡವು ಫೈನಲ್ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಬ್ಯಾಡ್ಮಿಂಟನ್
ಟೋಕಿಯೋ ಒಲಿಂಪಿಕ್ಸ್ ನಲ್ಲಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುರವರು, ಮಹಿಳೆಯರ ಸಿಂಗಲ್ಸ್ ನಲ್ಲಿ ಹಾಂಗ್ಕಾಂಗ್ ಸ್ಪರ್ಧಿಯನ್ನು ಸೋಲಿಸಿ ಪ್ರಿಕ್ವಾರ್ಟರ್ ಹಂತ ತಲುಪಿದ್ದಾರೆ.

ಬಾಕ್ಸಿಂಗ್
ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ 69 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಏರ್ ರೈಫಲ್
ಮಂಗಳವಾರ ನಡೆದ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಪಾಲ್ಗೊಂಡಿದ್ದ ಮನು ಭಾಕರ್ ಹಾಗೂ ಸೌರಭ್ ಚೌಧರಿ ನೀರಸ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ
#Tokyo #Olympics2020 #LiveUpdates








