ADVERTISEMENT
Sunday, June 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ದೇಶದ ಪ್ರತಿಯೊಬ್ಬ ಪ್ರಜೆಯೂ ಕೊರೊನಾ ವಿರುದ್ಧದ ಯುದ್ಧದಲ್ಲಿ ಸೈನಿಕ – ಪ್ರಧಾನಿ ಮೋದಿ…

admin by admin
April 26, 2020
in International, Newsbeat, Samagra karnataka
Share on FacebookShare on TwitterShare on WhatsappShare on Telegram

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ 64ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೊರೊನಾ ವೈರಸ್ ತೊಲಗಿಸಲು ದೇಶ ಸಾರಿರುವ ಯುದ್ಧದಲ್ಲಿ ಸೈನಿಕ ಎಂದು ಹೇಳಿದರು.
ದೇಶದ ಜನತೆ ಕೊರೊನಾ ವೈರಸ್ ವಿರುದ್ಧ ಸರ್ಕಾರದ ಜೊತೆ ಕೈಜೋಡಿಸಿ ಹೋರಾಡುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕೊರೊನಾ ವಿರುದ್ಧ ಸಾರಿರುವ ಯುದ್ಧದಲ್ಲಿ ಹೋರಾಡುತ್ತಿರುವ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಎಂದು ಪ್ರಧಾನಿ ಹೇಳಿದರು.

ರೈಲ್ವೆ ಸಂಸ್ಥೆಗಳು, ವಿಮಾನ ಸಂಸ್ಥೆಗಳು ಔಷಧಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡುತ್ತಿವೆ. ಮಾಸ್ಕ್ ಧರಿಸಿದ್ದಾರೆ ಎಂದರೆ ಅವರು ಅಸ್ವಸ್ಥರು ಎಂದು ಅರ್ಥವಲ್ಲ. ಸೋಂಕಿನಿಂದ ದೂರ ಉಳಿಯಲು ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯದ ಹಿತ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಮೋದಿ ಹೇಳಿದರು. ಹಾಗೆಯೇ ಎಲ್ಲೆಂದರಲ್ಲಿ ಉಗುಳಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪು ಎಂದು ಗೊತ್ತಿದ್ದರು ಕೆಲವರು ಅದೇ ತಪ್ಪನ್ನು ಮಾಡುತ್ತಿದ್ದಾರೆ. ದಯವಿಟ್ಟು ಎಲ್ಲೆಂದರಲ್ಲಿ ಉಗುಳಬೇಡಿ, ಸ್ವಚ್ಛತೆ ಕಾಪಾಡಿಕೊಳ್ಳಿ. ಈ ಮೂಲಕ ಸೋಂಕು ಹರಡುವುದನ್ನು ನಾವು ತಡೆಗಟ್ಟೋಣ ಎಂದು ಜನರಲ್ಲಿ ಮನವಿ ಮಾಡಿದರು.

Related posts

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

June 21, 2026
ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಎಚ್‌ಡಿಕೆ ಎಂದ CM – ಮತ್ತೆ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ: ಎಚ್‌ಡಿಕೆ ಮತ್ತು ಬಿಎಸ್‌ವೈಗೆ ಡಿಕೆಶಿ ಕೊಟ್ಟ ಆ ಒಂದು ಖಡಕ್ ಎಚ್ಚರಿಕೆ ಏನು?

June 21, 2026

ಇಂದು ಸಮಾಜ ಬದಲಾಗುತ್ತಿದೆ. ಪೊಲೀಸರ ಬಗ್ಗೆ ನಮಗೆ ಇದ್ದ ಅಭಿಪ್ರಾಯ ಕೂಡ ಬದಲಾಗುತ್ತಿದೆ. ಕೊರೊನಾ ವಾರಿರ್ಯಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬದಲಾವಣೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂದ ಅವರು ದೇಶದ ಹಲವೆಡೆ ಪೌರ ಕಾರ್ಮಿಕರ ಮೇಲೆ ಹೂವಿನ ಮಳೆಗೈದು ಜನರು ಧನ್ಯವಾದ ಸಲ್ಲಿಸಿದ್ದಾರೆ. ಈ ಮೊದಲು ಅವರ ಶ್ರಮವನ್ನು ಗಮನಿಸಿದ ಜನರು ಈಗ ಅವರ ಶ್ರಮ ಮತ್ತು ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಹೇಳಿದರು.

ದೇಶ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನರ್ಸ್ ಗಳು, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ನಮಗಾಗಿ ಸೇವೆಸಲ್ಲಿಸುತ್ತಿದ್ದಾರೆ. ನಾವು ಕೂಡ ಅವರನ್ನು ಗೌರವಿಸಬೇಕು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.‌ ಹಾಗೆ ನಮ್ಮ ರೈತರನ್ನು ಉಪವಾಸವಿರಲು ನಮ್ಮ ದೇಶದ ಜನರು ಯಾವತ್ತೂ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಹೇಳಿದರು. ಬಹಳಷ್ಟು ಮಂದಿ ಹಿರಿಯ ನಾಗರಿಕರು ತಮ್ಮ ಸಂಪೂರ್ಣ ಪಿಂಚಣಿ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿ ಕೊರೊನಾ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಬಡವರಿಗೆ ಹಂಚಲು ಬಹಳಷ್ಟು ಮಂದಿ ರೈತರು ಸರ್ಕಾರಕ್ಕೆ ಉಚಿತ ತರಕಾರಿಗಳನ್ನು ನೀಡುತ್ತಿದ್ದಾರೆ. ಹಲವಾರು ಮಂದಿ ಉಚಿತ ಮಾಸ್ಕ್ ಗಳನ್ನು ಬಡಜನರಿಗೆ ವಿತರಿಸುತ್ತಿದ್ದಾರೆ. ಈ ರೀತಿಯಲ್ಲಿ ಎಲ್ಲರೂ ಕೊರೊನಾ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿ ಹೋರಾಡುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇರೆ ಬೇರೆ ದೇಶಗಳಿಗೆ ಅಗತ್ಯವಿದ್ದ ಔಷಧಗಳನ್ನು ಭಾರತ ಪೂರೈಕೆ ಮಾಡಿರುವುದನ್ನು ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ ಪ್ರಧಾನಿ ಸಾಕಷ್ಟು ರಾಷ್ಟ್ರಗಳು ನಮ್ಮ ಸಹಾಯಕ್ಕೆ ಧನ್ಯವಾದ ಅರ್ಪಿಸಿವೆ ಎಂದರು. ಬೇರೆ ರಾಷ್ಟ್ರಗಳು ಭಾರತಕ್ಕೆ, ಭಾರತೀಯರಿಗೆ ಧನ್ಯವಾದ ಹೇಳಿದಾಗ ನನಗೆ ಹೆಮ್ಮೆ ಆಗುತ್ತದೆ ಎಂದ ಮೋದಿ ಭಾರತ ತನ್ನ ಜನತೆಯ ಹಿತಕ್ಕಾಗಿ ಭೂಮಿಯನ್ನು ಆರೋಗ್ಯಕರವಾಗಿಸಲು ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ಆರಂಭಗೊಂಡಿರುವ coronawarriors.gov.in ಎಂಬ ಪೋರ್ಟಲ್ ಮೂಲಕ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದು, ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದು ಮೋದಿ ಹೇಳಿದರು.
ಕೊರೋನಾ ಸೋಂಕಿನಿಂದ ಈ ವರ್ಷ ಅಕ್ಷಯ ತೃತೀಯವನ್ನು ಆಚರಿಸಲು ಸಾಧ್ಯವಾಗದಿದ್ದರೂ ನಮಗೆ ವಿಶೇಷ ಮಹತ್ವವನ್ನು ಹೊಂದಿದೆ. ಹಾಗೆಯೇ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ ಸಮಯದಲ್ಲಿ ಇಷ್ಟೊಂದು ತೊಂದರೆಗಳು ಬರಬಹುದು ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಈದ್ ಆಚರಣೆ ಸಮಯದ ವೇಳೆ ನಾವು ಕೊರೊನಾ ಮುಕ್ತರಾಗೋಣ ಎಂದು ಪ್ರಾರ್ಥಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.

Tags: Man Ki BaatNarendra modi
ShareTweetSendShare
Join us on:

Related Posts

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

ನೀಟ್ ಪರೀಕ್ಷೆ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಜೂಜಾಟ ಎಂದು ಆರೋಪ

by Shwetha
June 21, 2026
0

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಟ್ ಮರುಪರೀಕ್ಷೆಯ ವ್ಯವಸ್ಥಾಪನೆ ಕುರಿತು ಕೇಂದ್ರ ಸರ್ಕಾರ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಎಚ್‌ಡಿಕೆ ಎಂದ CM – ಮತ್ತೆ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ: ಎಚ್‌ಡಿಕೆ ಮತ್ತು ಬಿಎಸ್‌ವೈಗೆ ಡಿಕೆಶಿ ಕೊಟ್ಟ ಆ ಒಂದು ಖಡಕ್ ಎಚ್ಚರಿಕೆ ಏನು?

by Shwetha
June 21, 2026
0

ಬೆಂಗಳೂರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಮತ್ತು ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡಲು ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ...

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

by Shwetha
June 21, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರನ್ನು ದೆಹಲಿಗೆ ಕರೆಯಲಾಗಿದೆ ಎಂಬ ವರದಿಗಳ ಮಧ್ಯೆ, ಕರ್ನಾಟಕ ಗೃಹ ಸಚಿವ...

ಆರ್‌ಎಸ್‌ಎಸ್‌ ಗುಲಾಮರಲ್ಲ, ಸಂಘದವರೇ ನೇರ ಉತ್ತರ ನೀಡಲಿ: ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

ಆರ್‌ಎಸ್‌ಎಸ್‌ ಗುಲಾಮರಲ್ಲ, ಸಂಘದವರೇ ನೇರ ಉತ್ತರ ನೀಡಲಿ: ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

by Shwetha
June 21, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಮತ್ತು ಅದರ ಕಾರ್ಯವೈಖರಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸಂಘಟನೆಯ ಕುರಿತು...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 21, 2026
0

ದಿನ ಭವಿಷ್ಯ : 21-06-2026 1 ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ಹಾಗೂ ಸಕಾರಾತ್ಮಕ ದಿನವಾಗಿರುತ್ತದೆ. ನೀವು ಕೈಗೊಂಡ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram