ಜೀರಾ ರೈಸ್ (ರೆಸ್ಟೋರೆಂಟ್ ಸ್ಟೈಲ್)
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ – 1 ಕಪ್
ಜೀರಿಗೆ – 4 ಚಮಚ
ಹಸಿ ಮೆಣಸಿನಕಾಯಿ – 6
ತುಪ್ಪ – 8 ಚಮಚ
ಗೋಡಂಬಿ 20
ಈರುಳ್ಳಿ 1 ದೊಡ್ಡದು
ಕರಿಮೆಣಸು ಪುಡಿ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ

ಮೊದಲಿಗೆ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ಕುಕ್ಕರ್ ನಲ್ಲಿ ನೆನೆಸಿದ ಅಕ್ಕಿಯಿಂದ ಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ನಂತರ ಗೋಡಂಬಿ ಹುರಿದು ತೆಗೆದಿಡಿ. ನಂತರ ಜೀರಿಗೆ, ಉದ್ದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ. ನಂತರ ಉಪ್ಪು ಸೇರಿಸಿ ಬೆರೆಸಿ. ಬಳಿಕ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಚೆನ್ನಾಗಿ ಕಲಸಿ. ಮೇಲಿನಿಂದ ಗೋಡಂಬಿ ಹಾಕಿ ಅಲಂಕರಿಸಿದರೆ ಜೀರಾ ರೈಸ್ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1420572810108342279?s=19
ನುಚ್ಚಿನ ಉಂಡೆ#Saakshatv #cookingrecipe #nuchhinaunde https://t.co/C8VvRVlBdE
— Saaksha TV (@SaakshaTv) July 27, 2021
https://twitter.com/SaakshaTv/status/1420180351285145604?s=19
https://twitter.com/SaakshaTv/status/1420226067181326337?s=19
#Saakshatv #cookingrecipe #jeerarice








