ಇಡೀ ವಿಶ್ವಕ್ಕಿಂತ ಪ್ರತಿ ವಿಚಾರದಲ್ಲೂ ಬಾರತ ಹೇಗೆ ವಿಭಿನ್ನ..!
ಟ್ರಾವೆಲಿಂಗ್ ಯಾರಿಗೆ ತಾನೆ ಇಷ್ಟ ಇರೊದಿಲ್ಲ.. ಸಾಧ್ಯವಾದ್ರೆ ಇಡೀ ಪ್ರಪಂಚದಾದ್ಯoತ ಸುತ್ತಬೇಕು ಅನ್ನೋ ಆಸೆಗಳು ಪ್ರತಿಯೊಬ್ಬ ಮನುಷ್ಯಯರಿಗೂ ಇರುತ್ತೆ.. ಹಾ ಭಾರತದ ವಿಚಾರಕ್ಕೆ ಬಂದ್ರೆ ಪಾಕಿಸ್ತಾನ ಬಿಟ್ಟು ಬೇರೆ ಎಲ್ಲಾ ದೇಶಗಳಿಗೂ ಹೋಗೋ ಆಸಕ್ತಿ ಹೊಂದಿರುತ್ತಾರೆ.. ಇಇಡೀ ವಿಶ್ವ ಸುತ್ತಬೇಕಕು ಬೇರೆ ಬೇರೆ ದೇಶಗಳ ವಿಚಾರಗಳು , ಸಂಪ್ರದಾಯ ಅಲ್ಲಿ ವೈವಿದ್ಯತೆಗಳನ್ನ ತಿಳಿದುಕೊಳ್ಳಬೇಕು ಅನ್ನೋ ಆಸೆ ಕುತೂಹಲ ಎಲ್ರಲ್ಲೂ ಇರುತ್ತೆ.. ಆದ್ರೆ ಬೇರೆ ದೇಶಗಳ ಬಗ್ಗೆ ಮಾತನಾಡೋದಕ್ಕು ಮೊದಲು ನಾವು ನಮ್ಮದೇ ದೇಶ ಹೆಮ್ಮೆಯ ಭಾರತ ದೇಶದ ಬಗ್ಗೆ ಇಲ್ಲಿನ ವೈವಿದ್ಯತೆಗಳು , ಸಾಕಷ್ಟು ಇಂಟ್ರೆಸ್ಟಿoಗ್ ವಿಚಾರಗಳ ಬಗ್ಗೆ ಮೊದಲು ತಿಳಿಯಲೇ ಬೇಕು.. ಇವತ್ತು ನಾವು ವೈವಿದ್ಯತೆಯಲ್ಲಿ ಏಕತೆ ಎಂಬುವ ಸಂದೇಶವನ್ನ ಇಡೀ ವಿಶ್ವಕ್ಕೆ ರವಾನಿಸುವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾಗಿರುವ ನಮ್ಮ ಭಾರತದ ಬಗ್ಗೆ ತಿಳಿದುಕೊಳ್ಳೋಣ..
ಯಾವುದೇ ಒಂದು ಪ್ರದೇಶ , ದೇಶಗಳಿಗೆ ಹೋದಾಗ ಅಲ್ಲಿನ ವಾತಾವರಣಕಕ್ಕೆ ಹೇಗೋ ಕಷ್ಟ ಪಟ್ಟಾದ್ರೂ ಹೊಂದಿಕೊಳ್ಳಬಹುದು.. ಆದ್ರೆ ಅಲ್ಲಿನ ಬಾಷೆ ಮಾತನಾಡುವುದು ತೀರ ಕಷ್ಟವಾಗಿರುತ್ತೆ.. ಆದ್ರೆ ಬಹುತೇಕ ಬೇರೆ ದೇಶಗಳಲ್ಲಿ 3-4 ಭಾಷೆಗಳಲ್ಲಿ ಜನ ಮಾತನಾಡ್ತಾರೆ. ಆದ್ರೆ ಬಾರತ ಅಂತ ಬಂದಾಗ ಪ್ರತಿ ದೇಶಗಳಲ್ಲೂ ಬಾಷೆ , ಟೋನ್ , ಉಚ್ಛಾರಣೆ , ಪದಬಳಕೆ ಬದಲಾಗುತ್ತಾ ಹೋಗುತ್ತೆ.. ಇಡೀ ವಿಶ್ವದಲ್ಲಿ ಸುಮಾರು 8 ಸಾವಿರ ಬಾಷೆಗಳು ಇವೆ.. ಬಾರತದಲ್ಲೇ ಸುಮಾರು 1600 ಭಾಷೆಗಳು ಇವೆ.. ಇವುಗಳ ಪೈಕಿ ಸುಮಾರು 122 ಬಾಷೆಗಳನ್ನ ಪ್ರಮುಖ ಭಾಷೆಗಳಾಗಿ ಪ[ರಿಗಣಿಸಲಾಗಿದೆ.. ನಮ್ಮ ಕನ್ನಡ ಸಹ ಒಂದು..
ಆಶ್ಚರ್ಯಕರ ಸಂಗತಿ ಎಂದ್ರೆ ಇಷೆಲ್ಲಾ ಬಾಷೆಗಳಿದ್ದರೂ ಸಹ ಭಾರತಕ್ಕೆ ಈವರೆಗೂ ಯಾವುದೇ ಅಧಿಕೃತ ರಾಷ್ಟಭಾಷೆಯಿಲ್ಲ.. ಹಿಂದಿ ನಮ್ಮ ರಾಷ್ಟಬಾಷೆ ಅಂತ ಅನೇಕರುಜ ಯೋಚಿಸ್ತಾರೆ.. ಆದ್ರೆ ಹಿಂದೆಯನ್ನ ಅಧಿಕೃತ ಭಾಷೆಯಾಗಿ ಘೋಷನೆ ಮಾಡಲಾಗಿಲ್ಲ.. ಈ ಬಗ್ಗೆ ಕೆಲವೊಮ್ಮೆ ಸರ್ಕಾರ ಚಿಂತನೆ ನಡೆಸಿದ್‌ರೂ ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ.
ಹಿಂದೂಸ್ತಾನವು ಶಾಂತಿಪ್ರಿಯ ದೇಶ.. ಇಲ್ಲಿ ಎಲ್ಲಾ ಧರ್ಮ , ಜಾತಿಯರು , ಒಗ್ಗಟ್ಟಾಗಿ ಇದ್ದಾರೆ.. ಹೀಗಾಗಿಯೇ ಬಾರತ ಇಡೀ ವಿಶ್ವಾದ್ಯಂತ ವಿವಿಧತೆಯಲ್ಲಿ ಏಕತಾ ರಾಷ್ಟ , ಅತಿ ದೊಡ್ಡ ಪ್ರಜಾಪ್‌ರಭುತ್ವ ರಾಷ್ಟವಾಗಿ ಇಡೀ ವಿಶ್ವದಲ್ಲಿ ಒಂದು ಪ್ರಬಲ ಚಾಪು ಮೂಡಿಸಿದೆ. ಇಲ್ಲಿನ ಸಂಪ್ರದಾಯಕ್ಕೆ ವಿದೇಶಿಗರು ಕೂಡ ತಾವಾಗಿಯೇ ಶಿರಬಾಗಿ ನಮಸ್ಕರಿಸುವಂತಹ ಪುಣ್ಯ ಭೂಮಿ ನಮ್ಮ ಭಾರತ.
ಇತಿಹಾಸ ಹೇಳುತ್ತೆ ಭಾರತದ ಮೇಲೆ ಬ್ರಿಟೀಷರು ದಾಳಿ ನಡೆಸಿ , ಶತ ಶತಮಾನಗಳ ಕಾಲ ನಮ್ಮ ನೆಲದಲ್ಲಿ ನಮ್ಮವರನ್ನೇ ಗುಲಾಮರನ್ನಾಗಿಸಿ , ನಮ್ಮ ಮೇಲೆ ಸೋಷಣೆ ಮಾಡುತ್ತಾ , ನಮ್ಮನ್ನ ಲೂಟಿ ಮಾಡಿರುವ , ಸ್ವಾತಂತ್ರ ಹೋರಾಟಗಾರರು ನಮ್ಮದೇ ನೆಲಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದನ್ನ , ಕೆಚಚ್ಚೆದೆಯ ವೀರರ ತಾಯ್ನಾಡು ಭಾರತ ಅನ್ನುವದನ್ನ.. ಆದ್ರೆ ಯಾರ ಜೊತೆಗೂ ಕಾಲು ಕರೆದುಕೊಂಡು ಜಗಳಕ್ಕೆ ಹೋಗುವುದೂ ಇಲ್ಲ.. ಶತ್ರುತ್ವ ಬೆಳೆಸಿಕೊಳ್ಳುವುದೂ ಇಲ್ಲ. ಯಾರ ಮೇಲೂ ತಾನಾಗಿಯೇ ಯುದ್ಧವನ್ನೂ ಸಾರದೇ ಶಾಂತಿ ಪ್ರಿಯ ರಾಷ್ಟವಾಗಿಯೇ ಗುರುತಿಸಿಕೊಂಡಿದೆ. 10 ಸಾವಿರ ವರ್ಷಗಳ ಇತಿಹಾಸದಲ್ಲೇ ಬಾರತ ತಾನಾಗಿಯೇ ಯಾರ ಮೇಲೂ ಯುದ್ಧ ಸಾರಿರುವ ಇತಿಹಾಸವೇ ಇಲ್ಲ..
ಆದ್ರೆ ಭಾರತದ ತಂಟೆಗೆ ಬಂದೋರನ್ನ ಸುಮ್ಮನೆ ಬಿಟ್ಟಿಲ್ಲ.. ತಮ್ಮ ವಿರುದ್ಧ ದಂಡೆತ್ತಿ ಬಂದವರಿಗೆ ತಕ್ಕ ಪಾಠ ಕಲಿಸಿದ್ದಾರೆ ನಮ್ಮ ಭಾರತದ ಹೆಮ್ಮೆಯ ಸೈನಿಕರು.. ಇದಕ್ಕೆ ಉದಾಹರಣೆಯಾಗಿ ಕರ‍್ಗಿಲ್ ಯುದ್ಧ , ಪಾಕ್ ವಿರುದ್ಧದ ಸರ್ಜಿಕಲ್ ಸ್ಟೆಕ್ ಗಳನ್ನ ನಾವು ಇಲ್ಲಿ ಸ್ಮರಿಸಬಹುದು. ವಿಶ್ವದ ಅತಿ ದೊಡ್ಡ ಲೋಕತಂತ್ರ ಹೊಂದಿರುವ ಹಿಒರಿಮೆಯು ಭಾರತದ್ದು. ವಿಶ್ವದ ಅತಿ ದೊಡ್ಡ ಲಿಖಿತ ಸಂವಿದಾನ , ಜಗತ್ತಿನ ಅತಿ ಹೆಚ್ಚು ಜನಸಂಖ್ಯಾ ರಾಷ್ಟಗಳ ಪೈಕಿ 2ನೇ ಸ್ಥಾನದಲ್ಲಿದೆ ಭಾರತ . ಮೊದಲನೇ ಸ್ಥಾನದಲ್ಲಿರುವುದು ಕೊರೊನಾ ತವರುಮನೆ ಚೈನಾ..
ಏಷಾಯದಲ್ಲೇ ಅತಿ ದೊಡ್ಡ ರೈಲ್ವೇ ನೆಟ್ ವರ್ಕ್ ಹೊಂದಿರುವುದು ಭಾರತವೇ. ಜಗತ್ತಿನಲ್ಲಿ ಅಮೆರಿಕಾ ನಂತರ 2ನೇ ಸ್ತಾನದಲ್ಲಿದೆ. ಭಾರತದ ಬಗ್ಗೆ ಮಾತನಾಡ್ತಿದ್ದೀವಿ ಅಂದ್ರೆ ಅಲ್ಲಿ ಕ್ರಿಕೆಟ್ ಹಾಗೂ ಬಾಲಿವುಡ್ ನ ಮರೆಯೋ ಹಾಗಿಲ್ಲ.. ಒಂದು ಕಾಲವಿತ್ತು ಭಾರತದ ಸಿನಿಮಾರಂಗ ಅಂದ್ರೆ ಬಾಲಿವುಡ್ ಅಂತಿದ್ರು ಜನ.. ಆದ್ರೆ ಕಾಲ ಈಗ ಬದಲಾಗಿದೆ.. ಬಾಹುಬಲಿ ಕೆಜಿಎಫ್ ನಂತಹ ಸಿನಿಮಾಗಳು ಸೌತ್ ಸಿನಿಮಾ ಇಂಡಸ್ಟಿ ಮುಂದೆ ಬಾಲಿವುಡ್ ನಿಲ್ ಅನ್ನೋದನ್ನ ಸಾಬೀತು ಮಾಡಿವೆ.. ಬಾಲಿವುಡ್ ಸೌತ್ ಸಿನಿಮಾಗಳನ್ನ ಕಾಪಿ ಮಾಡುತ್ತಿರೋದು.. ಸಾಲು ಸಾಲು ಸಿನಿಮಾಗಳನ್ನ ಬಾಲಿವುಡ್ ರೀಮೇಕ್ ಮಾಡಿಕೊಳ್ತಿದೆ.. ಆದ್ರೆ ಎಲ್ಲರೂ ಒಪ್ಪಲೇಬೇಕಾದ ವಿಚಾರ ಅಂದ್ರೆ ಈಗ ಸದ್ಯಕ್ಕೆ ಬಾಲಿವುಡ್ ಹವಾ ಕಡಿಮೆಯಾಗಿದೆ.. ಸೌತ್ ಸಿನಿಮಾಗಳ ಪರ್ವ ಆರಂಭವಾಗಿದೆ.. ಹಿಂದಿ ಮಂದಿ ಸಹ ಬಾಲಿವುಡ್ ಸಿನಿಮಾಗಳ ಬದಲಾಗಿ ಹಿಂದಿ ಭಾಷೆಗೆ ಡಬ್ ಆಗ್ತಿರುವ ಕನ್ನಡ , ತಮಿಳು , ತೆಲುಗು ಮಳಯಾಳಂ ಬಾಷೆಗಳ ಸಿನಿಮಾಗಳನ್ನ ನೋಡಿ ಕೊಂಡಾಡ್ತಿದ್ದಾರೆ..
ಆದ್ರೆ ಸದ್ಯಕ್ಕೆ ಬಾಲಿವುಡ್ ಬಗ್ಗೆ ಮಾತನಾಡೋದಾದ್ರೆ ವಿಶ್ವದ ದೊಡ್ಡ ಸಿನಿಮಾ ಇಂಡ್ಸಿçಗಳ ಪೈಕಿ ಬಾಲಿವುಡ್ ಒಂದು.. ಇನ್ನೂ ನಮ್ಮ ದೇಶದಲ್ಲಿ ಕ್ರಿಕೆಟ್ ನ ಕ್ರೇಜ್ ಎಷ್ಟರ ಮಟ್ಟಿಗಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ.. ಗಲ್ಲಿ ಗಲ್ಲಿಯಲ್ಲೂ ಮಕ್ಕಳು ಯುವಕರು ಕ್ರಿಕೆಟ್ ಆಡ್ತಾರೆ.. ಟಿವಿ ಮುಂದೆ ಫ್ಯಾಮಿಲಿ ಜೊತೆ ಕೂತು ಟೀಮ್ ಇಂಡಿಯಾವನ್ನ ಚೀರ್ ಮಾಡುತ್ತಾ ಸಪೋರ್ಟ್ ಮಾಡ್ತಾರೆ. ಗದ್ರೆ, ಸೋತ್ರೆ ಮುಂದೆ ಗೆಲ್ಲುವ ಭರವಸೆ ಇಟ್ಟುಕೊಳ್ತಾ ಟೀಂ ಇಂಡಿಯಾಗೆ ಬೆಂಬಲಿಸುತ್ತಾರೆ..
ಆದ್ರೆ ಬಾರತ ಕಬಡ್ಡಿಯಲ್ಲಿ ತುಂಬಾ ಬಲಶಾಲಿ ಅನ್ನುವ ವಿಚಾರ ಸಾಕಷ್ಟು ಮಂದಿಗೆ ಗೊತ್ತಿಲ್ಲ.. ಹೌದು.. ಹೆಮ್ಮೆಯ ವಿಚಾರ ಅಂದ್ರೆ ಇದುವರೆಗೂ ನಡೆದಿರುವ 6 ವರ್ಲ್ಡ್ ಕಪ್ ನಲ್ಲೂ ಕಪ್ ಗೆದ್ದಿರೋರು ನಮ್ಮ ಭಾರತದವರೇ.. ಇಡೀ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಇರುವುದು ಭಾರತದಲ್ಲೇ.. ಅಹಹಮದಾಬಾದ್ ನ ಮುಜೆರಾ ಸ್ಟೇಡಿಯಮ್.. ಇಲ್ಲಿ ಒಂದೇ ಬಾರಿಗೆ 1 ಲಕ್ಷಕ್ಕಿಂತ ಹೆಚ್ಚು ಜನ ಕುಳಿತು ಮ್ಯಾಚ್ ವೀಕ್ಷಣೆ ಮಾಡಬಹುದು.. ಅತಿ ಹೆಚ್ಚು ಶುದ್ಧ ಸಸ್ಯಹಾರಿಗಳಿರುವ ದೇಶವೂ ಭಾರತವೇ.. ಬಾರತದಲ್ಲಿನ ವಿವಿಧ ಆಹಾರಗಳು ವರ್ಲ್ಡ್ ಫೇಮಸ್.. ಮಸಾಲೆಭರಿತ , ಸ್ಪೆಸಿ ಫುಡ್ ಗಳಿಗೆ ಫೇಮಸ್ ನಮ್ಮ ಇಂಡಿಯಾ..
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಪೋಸ್ಟ್ ಆಫೀಸ್ ಗಳನ್ನ ಹೊಂದಿರುವ ದೇಶ ಭಾರತ. ನೀರಿನ ಮೇಲೆ ಸ್ಥಿತವಾಗಿರುವ ಏಕೈಕ ಪೋಸ್ಟ್ ಆಫೀಸ್ ಜಮ್ಮು ಕಾಶ್ಮೀರದಲ್ಲಿ ಸ್ಥಿತವಾಗಿದೆ. ಇಡೀ ವಿಶ್ವಾದ್ಯಂತ ಆಡುವ ಚೆಸ್ / ಚದುರಂಗದ ಆಟದ ಅವಿಷ್ಕಾರ ಮಾಡಿದ್ದೇ ಭಾರತ.. ಈ ಆಟ ಬುದ್ದಿವಂತರ ಆಟ. ಬುದ್ದಿ ಪ್ರಾಬಲ್ಯತೆಯಿಂದ ಮಾತ್ರ ಗೆಲ್ಲಲು ಸಾಧ್ಯ.. ಅಂದ್ಮೇಲೆ ಭಾರತ ಪಪ್ರಾಚೀನ ಕಾಲದಿಂದಲೂ ಬುದ್ದಿವಂತಿಯಲ್ಲಿ ಇತರೇ ರಾಷ್ಟçಗಳಿಂತಲೂ ಮುಮದಿದೆ.. ಇನ್ನೂ ಇಡೀ ಜಗತ್ತಿಗೆ ಸೊನ್ನೆ ಕೊಟ್ಟ ಹೆಗ್ಗಳಿಕೆ ಭಾರತಕ್ಕೆ ಸಂದುತ್ತೆ.. ಸೊನ್ನೆ ಇಲ್ಲದೇ ಇದ್ದಿದ್ದರೆ ಇಂದು ಕೋಟಿ ಕೋಟಿ ಎಣಿಸುವುದಕ್ಕೆ ಹೇಗೆ ಸಾಧ್ಯವಾಗ್ತಿತ್ತು.. ಸ್ನೇಕ್ ಲ್ಯಾಡರ್ , ಲೂಡೋ ದಂತಹ ಆಟಗಳ ಆವಿಷ್ಕಾರವೂ ಬಾರತದ್ದೇ.
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಡೀ ವಿಶ್ವದ 5 ಪ್ರಬಲ ಬಾಹ್ಯಾಕಾಶ ಸಂಸ್ಥೆಗಳ ಪಟ್ಟಿಗೆ ಸೇರಿದೆ ಎನ್ನುವ ವಿಚಾರವನ್ನ ಇಂದು ಹೆಮ್ಮೆಯಿಂದ ನಾವು ಹೇಳಿಕೊಳ್ಳಬಹುದು. ಇನ್ನೂ ನಾಟವು ಯಾವುದೇ ವಸ್ತುಗಳನ್ನ ಖರೀದಿ ಮಾಡಿದ್ರು ಅದ್ರ ಮೇಲೆ ಎಂ ಆರ್ ಪಿ ಇದ್ದೇ ಇರುತ್ತೆ.. ಆದ್ರೆ ಇಡೀ ವಿಶ್ವದಲ್ಲಿ ಎಂ ಆರ್ ಪಿ ಅಥ ಪ್ರೆöÊಸ್ ಟ್ಯಾಗ್ ಇರುವ ಏಕ ಮಾತ್ರ ರಾಷ್ಟç ಭಾರತ. ಗಿನ್ನಿಸ್ ರೆಕಾರ್ಡ್ ವಿಚಾರದಲ್ಲಿ ಬಾರತ ವಿಶ್ವದ 3ನೇ ಸ್ಥಾನದಲ್ಲಿದೆ.
ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಟಾಚ್ಯೂ ಆಫ್ ಯುನಿಟಿ , ವಿಶ್ವದ ಅತಿ ದೊಡ್ಡ ಪಕ್ಷಿಯ ( ಕೇರಳ – ಜಟಾಯು ಪ್ರತಿಮೆ) ಪ್ರತಿಮೆಗಳು ನಮ್ಮ ಭಾರರತದಲ್ಲಿದೆ.. ವಿಶ್ವದಲ್ಲೇ ಅತಿ ಹೆಚ್ಚು ಮಸಾಲೆ ಪದಾರ್ಥಗಳ ಉತ್ಪಾದನೆಯಾವುದು , ವಿಶ್ವಾದ್ಯಂತ ರಫ್ತಾಗುವುದು ಬಾರತದಿಂದಲೇ. ಬಾಳೆಹಣ್ಣಿನ ಅತಿ ಹೆಚ್ಚು ಉತ್ಪಾದನೇ ಆಗೋದು ನಮ್ಮದದೇ ದೇಶದಲ್ಲಿ. ಇಂಡಿಯಾ ಟೀ ವಿಚಾರದಲ್ಲೂ ವಿಶ್ವಾದ್ಯಂತ ಫೇಮಸ್..
ಸಂಪ್ರದಾಯ ಪರಂಪರೆ ಪದ್ದತಿಯಲ್ಲಿಯೂ ನಮ್ಮ ಭಾರತವು ವಿಶ್ವದ ಎಲ್ಲಾ ರಾಷ್ಟçಗಳಿಗಿಂತಲೂ ಶ್ರೀಮಂತ.. ಅನೇಕಾದಿ ಪದ್ದತಿಗಳು , ಆಚರಣೆಗಳು , ಸಂಪ್ರದಾಗಳು , ರೀತಿ ರಿವಾಜುಗಳು ಭಾರತದ ಆಕರ್ಶಣೆ..