ಟೋಕಿಯೋ ಒಲಿಂಪಿಕ್ಸ್ 2021 – ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಫೈನಲ್ ಗೆ ಎಂಟ್ರಿ..!
ಭಾರತದ ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಎಸೆತದಲ್ಲಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಎ ಗುಂಪಿನಲ್ಲಿ ಸ್ಪರ್ಧೆ ಮಾಡಿದ್ದ ನೀರಜ್ ಚೋಪ್ರಾ ಅವರು 86.65 ಮೀಟರ್ ದೂರ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಹರಿಯಾಣದ ಪಾಣಿಪತ್ ನ ಖಾಂಡ್ರಾ ಗ್ರಾಮದ ರೈತನ ಮಗನಾಗಿರುವ ನೀರಜ್ ಚೋಪ್ರಾ ಅವರು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ.
23ರ ಹರೆಯದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಲು ವಿಫಲರಾದ್ರು. ಆದ್ರೆ ಇದಕ್ಕು ಮೊದಲು 2021ರ ಇಂಡಿಯನ್ ಗ್ರ್ಯಾಂಡ್ ಪ್ರಿ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು 88.07 ಮೀಟರ್ ಎಸೆದಿದ್ದರು.
ಇನ್ನು ಬಿ ಗುಂಪಿನಲ್ಲಿ ಸ್ಪರ್ಧೆ ಮಾಡಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಶಿವ್ ಪಾಲ್ ಸಿಂಗ್ ಅವರು ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಶಿವಪಾಲ್ ಸಿಂಗ್ ಅವರು 76.40 ಮೀಟರ್ ದೂರ ಎಸೆದಿದ್ದರು. ಆದ್ರೆ ಫೈನಲ್ ಗೆ ಅರ್ಹತೆ ಪಡೆಯಲು 83.50 ಮೀಟರ್ ದೂರ ಎಸೆಯಬೇಕಾಗಿದೆ. ಫೈನಲ್ ನಲ್ಲಿ ನೀರಜ್ ಚೋಪ್ರಾ ಅವರು 90 ಮೀಟರ್ ಗಡಿಯನ್ನು ದಾಟಿದ್ರೆ ಪದಕ ಗೆಲ್ಲಬಹುದಾಗಿದೆ. ಒಟ್ಟಿನಲ್ಲಿ ನೀರಜ್ ಚೋಪ್ರಾ ಅವರಿಗೆ ಆಲ್ ದಿ ಬೆಸ್ಟ್. ಭಾರತಕ್ಕೆ ಮತ್ತೊಂದು ಪದಕ ಸಿಗಲಿ ಎಂಬುದೇ ನಮ್ಮ ಹಾರೈಕೆ..!








