ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ : ಅಕ್ಕ ಶಿಲ್ಪಾ ಪರ ನಿಂತ ತಂಗಿ ಶಮಿತಾ ಶೆಟ್ಟಿ..!
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದಾರೆ.. ಆದ್ರೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಶಿಲ್ಪಾ ಶೆಟ್ಟಿ ಅವರ ಹೆಸರನ್ನ ಪದೇ ಪದೇ ಪ್ರಸ್ತಾಪಿಸುತ್ತಾ ಇರೋದಕ್ಕೆ ಶಿಲ್ಪಾ ಶೆಟ್ಟಿ ತಿರುಗಿಬಿದ್ದಿದ್ದರು. ಪ್ರಕರಣ ಆರಂಭದಿಂದಲೂ ಶಿಲ್ಪಾ ಶೆಟ್ಟಿ ಹಾಗೂ ತಂಗಿ ಶಮಿತಾ ಕೂಡ ಕುಂದ್ರಾ ಜೊತೆಗೆ ಟ್ರೋಲ್ ಆಗ್ತಾ ಇದ್ದಾರೆ..
ಇತ್ತೀಚೆಗೆ ಶಿಲ್ಪಾ ಶೆಟ್ಟಿ ನನ್ನ ಮಕ್ಕಳಿಗಾಗಿ ಗೌಪ್ಯತೆ ಕಾಪಾಡಿ , ನಾನು ತಾಯಿಯಾಗಿ ಬೇಡಿಕೊಳ್ತಿದ್ದೀನಿ ಅಂತ ಕಣ್ಣೀರಿಟ್ಟಿದ್ದರು.. ಶಿಲ್ಪಾ ಶೆಟ್ಟಿಗೆ ಅನೇಕ ತಾರೆಯರು ಸಪೋರ್ಟ್ ಮಾಡ್ತಿದ್ದಾರೆ.. ಇದೀಗ ತಂಗಿ ಶಮಿತಾ ಶೆಟ್ಟಿ ಸಹಹ ಶಿಲ್ಪಾಗೆ ಬೆಂಬಲಿಸುತ್ತಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರೋ ಶಮಿತಾ , ನಿನ್ನ ಸದಾ ಪ್ರೀತಿಸುವೆ ಮುಂಕಿ (ಶಿಲ್ಪಾ ಶೆಟ್ಟಿ), ಯಾವುದೇ ಕಷ್ಟದ ಸಂದರ್ಭದಲ್ಲೂ ನಾನು ನಿನ್ನ ಜೊತೆಗೆ ಇದ್ದೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಶಮಿತಾ ಶೆಟ್ಟಿ ಪೋಸ್ಟ್‌ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. 
ಶಮಿತಾ ವಿರುದ್ಧ ಆರೋಪ
ಬಂಧಿತ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳ ಅಪ್ ಲೋಡ್ ಮಾಡೊದಕ್ಕೆ ಆಪ್ ಲಾಂಚ್ ಮಾಡುವ ತಯಾರಿಯಲ್ಲಿದ್ದರು.. ಈ ಆಪ್ ನಲ್ಲಿನ ಒಂದು ವಿಡಿಯೋದಲ್ಲಿ ಶಮಿತಾ ಕೂಡ ನಟಿಸಲು ಒಪ್ಪಿದ್ರು ಎಂಬ ಆರೋಪ ಕೇಳಿಬಂದಿತ್ತು..
ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಆರ್.ಮಾಧವನ್ ಸಹ ಶಿಲ್ಪಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ನೋಡಿದ ಅತ್ಯಂತ ಗಟ್ಟಿ ಮಹಿಳೆಯರಲ್ಲಿ ನೀವು ಒಬ್ಬರು. ಈ ಸವಾಲಿನ ಸಮಯವನ್ನು ನೀವು ಘನತೆಯಿಂದ ಪಾರಾಗಿ ಬರುತ್ತೀರ ಎಂಬ ವಿಶ್ವಾಸ ನನಗೆ ಇದೆ. ನನ್ನ ಪ್ರಾರ್ಥನೆಗಳು ನಿಮಗೆ ಹಾಗೂ ನಿಮ್ಮ ಕುಟುಂಬ ಪರವಾಗಿ ಸದಾ ಇರುತ್ತದೆ ಎಂದಿದ್ದಾರೆ.
ಅಲ್ಲದೇ ಮಹಿಳಾ ಹೋರಾಟಗಾರ್ತಿ ಹಾಗೂ ನಟಿಯಾಗಿರುವ ರಿಚಾ ಚಡ್ಡಾ ಸಹ ಶಿಲ್ಪಾಗೆ ಬೆಂಬಲಿಸಿ ಟ್ವೀಟ್ ಮಾಡಿ ಟ್ರೋಲಿಗರ ನಡೆಯನ್ನ ಪ್ರಶ್ನೆ ಮಾಡಿದ್ದರು. ‘ನಮ್ಮ ದೇಶದಲ್ಲಿ ಪುರುಷರು ಮಾಡುವ ತಪ್ಪಿಗೆ ಮಹಿಳೆಯರನ್ನು ನಿಂದಿಸಲಾಗುತ್ತದೆ. ಇದೊಂದು ರೀತಿ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿಬಿಟ್ಟಿದೆ. ತಮ್ಮ ವಿರುದ್ಧ ಅಕಾರಣ ನಿಂದನೆ ಮಾಡುವವರ ಮೇಲೆ ಮೊಕದ್ದಮೆ ಹೂಡಲು ಮುಂದಾಗಿರುವುದು ಬಹಳ ಒಳ್ಳೆಯ ಬೆಳವಣಿಗೆ’ ಎಂದು ಹೇಳಿದ್ದರು.
Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ








