Rap ಸಿಂಗರ್ ಯೋ ಯೋ ಹನಿಸಿಂಗ್ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ
ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಸುದ್ದಿಯಾಗ್ತಾರೆ.. ಆ ವಿಚಾರ ಎಷ್ಟೇ ಚಿಕ್ಕದಿರಲಿ , ದೊಡ್ಡದೇ ಇರಲಿ , ಖಾಸಗಿ ವಿಚಾರವೇ ಆಗಿರಲಿ.. ಹಾಗೇಯೇ ಅನೇಕರ ದಾಂಪತ್ಯ ಬೀದಿಗೆ ಬಂದಿರುವ ಸಾಕಷ್ಟು ಉದಾಹರಣಗಳಿವೆ..
ಇದೀಗ ಬಾಲಿವುಡ್ ಗಾಯಕ ಹಾಗೂ ನಟ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. Rap ಸಿಂಗರ್ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಪತ್ನಿ ಶಾಲಿನಿ ತಲ್ವಾರ್, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಿಂಸೆಯ ಆರೋಪ ಮಾಡಿದ್ದಾರೆ.
ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಅಡಿಯಲ್ಲಿ ಶಾಲಿನಿ ತಲ್ವಾರ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶ್ರೀಮತಿ ತಾನಿಯಾ ಸಿಂಗ್ ಅವರು ಆಗಸ್ಟ್ 3 ರಂದು ಹನಿಸಿಂಗ್ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಪರಿಗಣಿಸಿದ್ದಾರೆ.
ಈ ಸಂಬಂಧ ಆಗಸ್ಟ್ 28ರೊಳಗೆ ಕೋರ್ಟ್‌ಗೆ ಉತ್ತರ ನೀಡಬೇಕು ಎಂದು ಹನಿಸಿಂಗ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇನ್ನು ಶಾಲಿನಿ ತಲ್ವಾರ್ ಮತ್ತು ಯೋ ಯೋ ಹನಿಸಿಂಗ್ ಅವರ ಜಂಟಿ ಒಡೆತನದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.
ಬಾಲಿವುಡ್ ನಲ್ಲಿ ಸಕ್ರಿಯರಾಗುವುದಕ್ಕೂ ಮುಂಚೆಯೇ ಯೋ ಯೋ ಹನಿಸಿಂಗ್ ಮದುವೆ ಅಗಿದ್ದರು. ಆದರೆ, 2014ರ ಇಂಡಿಯಾ’ಸ್ ರಾಸ್ಟಾರ್ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಪತ್ನಿಯನ್ನು ಪರಿಚಯಿಸಿದ್ದರು. ಇದೀಗ ಹನಿಸಿಂಗ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಕೋರ್ಟ್ ಅಂಗಳ ತಲುಪಿದೆ..
ಹಳೆಯ ವಿವಾದ
2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಹನಿಸಿಂಗ್ ಹಾಡುಗಳ ಸಾಹಿತ್ಯ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಪ್ರಚೋದಿಸುವ ಸಾಹಿತ್ಯ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರ ತಂಡ ಎಫ್‌ಐಆರ್ ಸಹ ದಾಖಲಿಸಿದ್ದರು.
ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದ ‘ಲುಂಗಿ ಡ್ಯಾನ್ಸ್’ ಹಾಡು ಸೆರಿದಂತೆ ಹಲವಾರು ಹಾಡುಗಳನ್ನ ಕಂಪೋಸ್ ಮಾಡಿರುವ ಹನಿಸಿಂಗ್ ಸಾಕಷ್ಟು ಆಲ್ ಬಂಬ್ ಸಾಂಗ್ ಗಳನ್ನೂ ಕಾಂಪೋಸ್ ಮಾಡೋದ್ರ ಜೊತೆಗೆ ಹಾಡಿದ್ದಾರೆ..
ಹೆಡ್ – ಬುಶ್ ಗೆ ಡಾಲಿ ನಿರ್ಮಾಪಕ – ಈ ನಿರ್ಧಾರಕ್ಕೆ ನಿಜವಾದ ಕಾರಣವೇನು..?