ಟಿ-20 ವಿಶ್ವಕಪ್ | ಇಂಡೋ – ಪಾಕ್ ದಂಗಲ್ ಗೆ ದಿನಾಂಕ ಫಿಕ್ಸ್
ನವದೆಹಲಿ : ವಿಶ್ವ ಚುಟುಕು ಕ್ರಿಕೆಟ್ ನ ಮಹಾ ಸಂಗ್ರಾಮದಲ್ಲಿ ಬದ್ಧವೈರಿಗಳ ಕಾಳಗಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ 2021ಕ್ಕೆ ಬಿಸಿಸಿಐ ಆತಿಥ್ಯ ವಹಿಸಲಿದ್ದು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪಂದ್ಯಗಳು ಒಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿವೆ.
ಮಾರ್ಚ್ 20, 2021ರ ವೇಳೆಗೆ ಇದ್ದ ಶ್ರೇಯಾಂಕಗಳ ಆಧಾರದ ಮೇಲೆ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು.
ಗ್ರೂಪ್ ಎರಡರಲ್ಲಿ ಭಾರತ ಮತ್ತು ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ಮುಂತಾದ ತಂಡಗಳಿವೆ.