ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ : ಭೈರತಿ ಬಸವರಾಜ್ ಸಮರ್ಥನೆ
ದಾವಣಗೆರೆ : ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಬಿಜೆಪಿಯಲ್ಲೇ ಅಸಮಧಾನ ಎದ್ದಿದೆ. ಈ ಮಧ್ಯೆ ಶಶಿಕಲಾ ಜೊಲ್ಲೆ ಸಚಿವ ಸ್ಥಾನ ನೀಡಿದ್ದನ್ನು ಸಚಿವ ಬೈರತಿ ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಜೊಲ್ಲೆ ಅವರ ಮೇಲಿರುವುದು ಕೇವಲ ಆರೋಪ, ಅದು ಸಾಬೀತಾಗಿಲ್ಲ. ಈ ವಿಷಯದ ಬಗ್ಗೆ ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.
ಇನ್ನು ಖಾತೆ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ದಾವಣಗೆರೆ ಉಸ್ತುವಾರಿ ನಿಭಾಯಿಸಲು ಸಿಎಂ ಹೇಳಿದ ಹಿನ್ನೆಲೆ ದಾವಣಗೆರೆಗೆ ಬಂದಿದ್ದೇನೆ.
ಸಿಎಂ ಅವರು ನಾಳೆ ಬೇರೆ ಜಿಲ್ಲೆ ಉಸ್ತುವಾರಿ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ. ಇಂಥದೇ ಖಾತೆ, ಇಂಥದೇ ಜಿಲ್ಲೆ ಉಸ್ತುವಾರಿಗೆ ಕೇಳಿಲ್ಲ.
ನಾಯಕ ಸಮಾಜಕ್ಕೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಚಿವಾಲಯ ಘೋಷಣೆಯಾಗಿದೆ. ಕೆಲವು ಅಸಮಾಧಾನ ಇರುತ್ತೆ. ಅದನ್ನು ಪರಿಹಾರ ಮಾಡುತ್ತೇವೆ.
ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಚರ್ಚಿಸಿದ್ದೇನೆ. ಸಚಿವ ಸ್ಥಾನದ ಬಗ್ಗೆ ಯಾವುದೇ ಅಸಮಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.









