ಇಂದಿರಾ ಕ್ಯಾಂಟೀನ್ ಬದಲಿಗೆ ಅನ್ನಪೂಣೇಶ್ವರಿ ಹೆಸರಿಟ್ಟರೆ ತಪ್ಪೇನು : ಸುಧಾಕರ್
ಚಿಕ್ಕಬಳ್ಳಾಪರು : ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಟ್ಟರೇ ತಪ್ಪೇನು ಎಂದು ಸಿಟಿ ರವಿ ಪರ ಸಚಿವ ಡಾ ಕೆ ಸುಧಾಕರ್ ಬ್ಯಾಟ್ ಬೀಸಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟ್ವೀಟ್ ಮಾಡಿ, ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂಬುದಾಗಿ ಹೆಸರು ಬದಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು.
ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ಸಿಟಿ ರವಿಯವರು ಇಂದಿರಾ ಕ್ಯಾಂಟೀನ್, ಅನ್ನಪೂರ್ಣೇಶ್ವರಿ ಕ್ಯಾಟೀನ್ ಎಂದು ಹೆಸರಿಡಲು ವಿಚಾರ ಪ್ರಸ್ತಾಪಿಸಿದ್ದಾರೆ. ಆದ್ರೆ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಅನ್ನಪೂರ್ಣೇಶ್ವರಿ ನಮಗೆಲ್ಲರಿಗೂ ಇಂದಿರಾ ಗಾಂಧಿಯವರಿಗೆ ತಾಯಿ ಇದ್ದಂತೆ. ಹೀಗಾಗಿ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನು ಎಂದು ಪ್ರಶ್ನಿಸಿದರು.
ಇನ್ನು ಖಾತೆ ಕ್ಯಾತೆ ವಿಚಾರವಾಗಿ ಮಾತನಾಡಿ, ಈಗಾಗಲೇ ಆನಂದ್ ಸಿಂಗ್ ಸಿಎಂ ಜೊತೆಗೆ ಚರ್ಚಿಸಿದ್ದಾರೆ. ಎಂಟಿಬಿ ನಾಗರಾಜ್ ಕೂಡ ಸಿಎಂ ಭೇಟಿಯಾಗಿ ಮಾತನಾಡಿದ್ದಾರೆ. ಏನೇ ಅಸಮಾಧಾನವಿದ್ದರೂ ಸಿಎಂ ಬಗೆಹರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.









