ಕಾರವಾರ | ಈಜಲು ಹೋದ ಯುವಕ ನೀರು ಪಾಲು
ಕಾರವಾರ : ಕುಮಟಾ ತಾಲೂಕಿನ ಗೋಕರ್ಣದ ಕಡಲ ತೀರದಲ್ಲಿ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ.
ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕನಾಗಿದ್ದಾನೆ.
ಅರುಣ ಲಕ್ಕಪ್ಪ ಸೇರಿದಂತೆ ಇಂದು ಎಂಟು ಮಂದಿ ಬೆಂಗಳೂರಿನಿಂದ ಗೋಕರ್ಣಕ್ಕೆ ಮುಂಜಾನೆ ಪ್ರವಾಸಕ್ಕೆ ಬಂದಿದ್ದರು.
ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.
ಈ ವೇಳೆ ಅರುಣ ಲಕ್ಕಪ್ಪ ಮತ್ತು ಆತನ ಸ್ನೇಹಿತ ಅಲೆಯ ಅಬ್ಬರಕ್ಕೆ ಕೊಚ್ಚಿಹೋಗಿದ್ದಾರೆ.
ಕೂಡಲೇ ಜಾಗೃತರಾದ ಲೈಫ್ ಗಾರ್ಡ, ಸ್ಥಳೀಯರ ನೆರವಿನಿಂದ ಒಬ್ಬರನ್ನು ರಕ್ಷಿಸಿದ್ದಾರೆ. ಆದರೆ ಅಲೆಗಳ ಅಬ್ಬರಕ್ಕೆ ಅರುಣ್ ತೇಲಿ ಹೋಗಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.









