ಪತಿ ಜೈಲಲ್ಲಿ.. ಶಿಲ್ಪಾ ಶೆಟ್ಟಿ ಬಂಧನದ ಭೀತಿಯಲ್ಲಿ … ವಂಚನೆ ಕೇಸ್ ನಲ್ಲಿ ನಟಿ , ತಾಯಿ ವಿರುದ್ಧ ಕೇಸ್ ದಾಖಲು..!
ಬಾಲಿವುಡ್ ನ ಸ್ಟಾರ್ ನಟಿ ಫಿಟ್ ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.. ಒಂದೆಡೆ ಪತಿ ಜೈಲಲ್ಲಿ ದಿನಗಳೆಯುತ್ತಿದ್ದು, ಜೀಮೀನು ಕೂಡ ಸಿಗದೇ ಒದ್ದಾಡುತ್ತಿದ್ದಾರೆ.. ಮತ್ತೊಂದೆಡೆ ಟ್ರೋಲಿಗರ ಕಾಟದಿಂದ ಕಣ್ಣೀರಿಡುತ್ತಿರುವ ಶಿಲ್ಪಾ ಶೆಟ್ಟಿಗೆ ಮತ್ತೊಂದು ದೊಡ್ಡ ತಲೆ ನೋವು ಶುರುವಾಗಿದೆ.. ಬಂಧನದ ಭೀತಿ ಎದುರಾಗಿದೆ..
ಶಿಲ್ಪಾ ಶೆಟ್ಟಿಗೂ ಬಂಧನದ ಭೀತಿ ಎದುರಾಗಿದೆ.. ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ವೆಲ್ ಫೇರ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣದಡಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಲಕ್ನೋದ ಹಜರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಈ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಯನ್ನು ವಿಚಾರಣೆ ನಡೆಸಲು ಲಕ್ನೋ ಪೊಲೀಸರು ಮುಂಬೈಗೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಶಿಲ್ಪಾ ಶೆಟ್ಟಿ ಲೋಸಿಸ್ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ಫಿಟ್ನೆಸ್ ಚೈನ್ ನಡೆಸುತ್ತಿದ್ದಾರೆ. ಈ ಕಂಪನಿಯ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ಆಗಿದ್ದಾರೆ. ತಾಯಿ ಸುನಂದಾ ಶೆಟ್ಟಿ ಈ ಕಂಪನೆಯ ನಿರ್ದೇಶಕರಾಗಿದ್ದಾರೆ. ಈ ಕಂಪನಿಯನ್ನು ತೆರೆಯುವ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಅವರು ಕೋಟ್ಯಾಂತರ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಓಮ್ಯಾಕ್ಸ್ ಹೈಟ್ ನಿವಾಸಿ ಜ್ಯೋತ್ಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ದೂರು ದಾಖಲಿಸಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ಆಕೆಯ ತಾಯಿ ಸುನಂದಾ ಅವರನ್ನು ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿ ಮುಂಬೈಗೆ ತೆರಳಲಿದ್ದಾರೆ ಎಂದು ಡಿಸಿಪಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಇತ್ತೀಚಿಗಷ್ಟೆ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ 1.6 ಕೋಟಿ ಮೌಲ್ಯದ ಜಮೀನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸುಧಾಕರ್ ಘರೆ ಎಂಬ ವ್ಯಕ್ತಿ ನಕಲಿ ಪತ್ರಗಳನ್ನು ಸೃಷ್ಟಿಸಿ ತನಗೆ ಜಮೀನು ಮಾರಾಟ ಮಾಡಿ 1.6 ಕೋಟಿ ವಂಚಿಸಿದ್ದಾನೆ ಎಂದು ಸುನಂದಾ ಶೆಟ್ಟಿ ಆರೋಪಿಸಿ ದೂರು ನೀಡಿದ್ದರು. ಇದೀಗ ಸುನಂದಾ ಶೆಟ್ಟಿ ಮತ್ತು ಮಗಳು ಶಿಲ್ಪಾ ಶೆಟ್ಟಿ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಹಿರಿಯ ನಟಿ ಲೀಲಾವತಿ ಭೇಟಿ ಆಗಿ ಆರೋಗ್ಯ ವಿಚಾರಿಸಿದ ಚಂದನವನದ ತಾರೆಯರು..!
ಜುಲೈ 19ರಂದು ರಾಜ್ ಕುಂದ್ರ ಬಂಧನ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಅರೆಸ್ಟ್ ಮಾಡಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜ್ ಕುಂದ್ರಾರನ್ನು ಬಳಿಕ 14 ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ, ಗೆಹನಾ ವಸಿಷ್ಠ್ ಸೇರಿದಂತೆ ಮತ್ತೆ ಕೆಲವು ನಟಿಯ ಹೆಸರು ಕೇಳಿಬರುತ್ತಿದೆ. ಅವರುಗಳ ವಿಚಾರಣೆ ಸಹ ನಡೆದಿದೆ.. ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಚಾರಗಳು ಬಹಿರಂಗವಾಗ್ತಿದೆ..








