ನಾನು ಮೋದಿಗಿಂತ ಸೀನಿಯರ್, ಸ್ವಾತಂತ್ರ್ಯ ಬರೋಕೆ ಮುಂಚೆ ಹುಟ್ಟಿದ್ದೇನೆ : ಸಿದ್ದರಾಮಯ್ಯ
ಬೆಂಗಳೂರು: ನಾನು ಸ್ವಾತಂತ್ರ್ಯ ಬರೋಕೆ ಮುಂಚೆ ಹುಟ್ಟಿದ್ದೇನೆ. ಮೋದಿ ಹುಟ್ಟಿದ್ದು, ಸ್ವಾತಂತ್ರ್ಯ ಬಂದಮೇಲೆ , ನಾನು ಮೋದಿಗಿಂತ ಸೀನಿಯರ್ ಎಂದು ಮಾಜಿ ಸಿಎಂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ 60 ವರ್ಷ ಅಧಿಕಾರ ಕೊಟ್ಟಿದ್ದೀರಾ. ನಮಗೆ ಅರವತ್ತು ತಿಂಗಳು ಕೊಡಿ ಅಂತ ಮೋದಿ ಹೇಳಿದ್ರು.. ಆದ್ರೆ 7 ವರ್ಷದಲ್ಲಿ ಏನಾದ್ರು ಬದಲಾವಣೆ ಆಗಿದೆಯಾ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜಿಡಿಪಿ ಮೈನಸ್ ಆಗಿದೆ. ಇದು ಮೋದಿಯವರ ಸಾಧನೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಇದೇ ವೇಳೆ ಸಾಮಾನ್ಯ ಜನರ ಲಿವಿಂಗ್ ಆಫ್ ಕಾಸ್ಟ್ ಹೆಚ್ಚಾಗಿದೆ. ಸಾಮನ್ಯ ಜನರು ಹೇಗೆ ಬದುಕುತ್ತಾರೆ. ಉದ್ಯೋಗ ಕಳೆದುಕೊಂಡಿದ್ದರೆ, 7 ವರ್ಷ ಬರೀ ಸುಳ್ಳು ಮಾತ್ರ ಹೇಳಿದ್ದು, ಮೋದಿ, ಬಿಜೆಪಿಯವರಷ್ಟು ಸುಳ್ಳುಗಾಗರು ಇಲ್ಲ. ಬಿಜೆಪಿಗರು ಸ್ವತಂತ್ರಕ್ಕೆ ಯಾವುದೇ ತ್ಯಾಗ ಮಾಡಿಲ್ಲ, ಕಾಂಗ್ರೆಸ್ ಮಾತ್ರ ಸ್ವಾತಂತ್ರಕ್ಕೆ ತ್ಯಾಗ ಮಾಡಿದ್ದು, ವಲಸೆ ಹೋದರಲ್ಲ ಅವರೆಲ್ಲ ನಿಜವಾದ ಕಾಂಗ್ರೆಸ್ಸಿಗರಲ್ಲ ಪಕ್ಷ ನಿಷ್ಠೆ ಇಲ್ಲದವರು ಈಗಲೂ ಇದ್ದಾರೆ ಅವರ ಹೆಸರು ಹೇಳುವುದು ಬೇಡ ಎಂದಿದ್ದಾರೆ.
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ ಎಂದ ಅಜಯ್ ರಾವ್..!
ಬಿಜೆಪಿಯವರು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಬದಲಾವಣೆ ಮಾಡಿದ್ದಾರೆ. ಆದರೆ ಅಭಿವೃದ್ಧಿಯನ್ನಲ್ಲ. 28% ಜನ ಬಡತನದ ರೇಖೆಗಿಂತ ಕೆಳಗೆ ಹೋಗಿದ್ದಾರೆ. ನಿರುದ್ಯೋಗ ಯದ್ವಾತದ್ವಾ ಹೆಚ್ಚಾಗಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆಯಾಗಿದೆ. ದೇಶದ ಜನರ ಬದುಕುವ ಪರಿಸ್ಥಿತಿ ಶೋಚನೀಯವಾಗಿದೆ. ಅಷ್ಟು ಕೆಟ್ಟ ಪರಿಸ್ಥಿತಿಯನ್ನ ಇವರು ತಂದಿಟ್ಟಿದ್ದಾರೆ. ಸಾಮಾನ್ಯ ಜನ ಬದುಕೋಕೆ ಕಷ್ಟವಾಗಿದೆ. 7 ವರ್ಷದ ಸಾಧನೆ ಸುಳ್ಳು ಹೇಳಿದ್ದು ಬಿಟ್ಟರೆ ಬೇರೇನಿಲ್ಲ. ಸ್ವಾತಂತ್ರ್ಯ ನಂತರ ಇವರಷ್ಟು ಸುಳ್ಳು ಯಾರು ಹೇಳಿಲ್ಲ ಎಂದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಇವಾಗ ಮತ್ತೊಬ್ಬ ಸಿಎಂ ಬಂದಿದ್ದಾರೆ. ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್. ಅವರಿಂದ ಏನೂ ನೀರಿಕ್ಷೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕಾಲ ಕೂಡಿ ಬಂದಿದೆ ಮತ್ತೆ ಹೋರಾಟ ಮಾಡೋಣ, ಅಧಿಕಾರಕ್ಕೆ ಬರೋಣ, ಸ್ವತಂತ್ರವಾಗಿ ಅಧಿಕಾರಕ್ಕೆ ಬರೋಣ. ಕ್ವಿಟ್ ಚಳುವಳಿ ನಮಗೆ ಮಾದರಿಯಾಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.








