ತೊಂಡೆಕಾಯಿ ರೈಸ್ ಬಾತ್
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ – 20
ಬಾಸುಮತಿ ಅಕ್ಕಿ -3 ಕಪ್
ಆಲೂಗಡ್ಡೆ-1
ಈರುಳ್ಳಿ -2
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – 6 ಚಮಚ
ಲಿಂಬೆ ಹಣ್ಣಿನ ರಸ -1 ಚಮಚ
ಅರಿಶಿನ ಚಿಟಿಕೆಯಷ್ಟು
ಮಸಾಲಾ ಪುಡಿ ಸಾಮಗ್ರಿಗಳು
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ -1 ಚಮಚ
ಕಾಳುಮೆಣಸು – 1/2 ಚಮಚ
ಒಣಗಿರುವ ಕೊಬ್ಬರಿ – 4ಚಮಚ
ಎಳ್ಳು -1 ಚಮಚ
ಕೆಂಪು ಒಣ ಮೆಣಸು
ಕೊತ್ತಂಬರಿ ಬೀಜ- 1ಚಮಚ

ಮಾಡುವ ವಿಧಾನ
ಮೊದಲಿಗೆ ತೊಂಡೆಕಾಯಿಯನ್ನು ಉದ್ದಗೆ ಕತ್ತರಿಸಿಕೊಂಡು ಎಣ್ಣೆ ಮತ್ತು ಅರಿಶಿನ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ
ಕಡಲೆಬೇಳೆ, ಉದ್ದಿನಬೇಳೆ, ಕಾಳುಮೆಣಸು,ಒಣಗಿರುವ ಕೊಬ್ಬರಿ, ಎಳ್ಳು, ಕೆಂಪು ಒಣ ಮೆಣಸು, ಕೊತ್ತಂಬರಿ ಬೀಜಗಳನ್ನು 1 ಚಮಚ ಎಣ್ಣೆಯಲ್ಲಿ ಉರಿದು ತಣ್ಣಗಾದನಂತರ ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿ.
ಮಧ್ಯಮ ಉರಿಯಲ್ಲಿ ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಮಸಾಲೆ ಎಲೆಯನ್ನು ಹಾಕಿ ಬಾಡಿಸಿಕೊಳ್ಳಿ. ನಂತರ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಬಾಡಿಸಿಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಈ ಮೊದಲೇ ಹುರಿದಿಟ್ಟುಕೊಂಡಿರುವ ತೊಂಡೆಕಾಯಿಯನ್ನು ಇದಕ್ಕೆ ಸೇರಿಸಿ. ಹುಡಿ ಮಾಡಿರುವ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಮತ್ತು ನೀರನ್ನು ಹಾಕಿ ಲಿಂಬೆರಸವನ್ನು ಸೇರಿಸಿ. ಕುಕ್ಕರ್ ನಲ್ಲಿ 3 ವಿಸಲ್ ಬರುವವರೆಗೆ ಬೇಯಿಸಿ. ಈಗ ರುಚಿಯಾದ ತೊಂಡೆಕಾಯಿ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ನಮ್ಮ ದೇಹಕ್ಕೆ ವಿಟಮಿನ್ ಸಿ ಏಕೆ ಮುಖ್ಯ? ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳು ಯಾವುವು?#VitaminC #RichFoods https://t.co/j34mzhhNNZ
— Saaksha TV (@SaakshaTv) August 4, 2021
ಝಿಕಾ ವೈರಸ್ ನ ಬಗ್ಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿಗಳು https://t.co/bxObkZUpkS
— Saaksha TV (@SaakshaTv) August 3, 2021
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಾನೀಯಗಳು#Saakshatvhealthtips #strongImmunity https://t.co/AYSSwaEhcf
— Saaksha TV (@SaakshaTv) August 3, 2021
ಅಕ್ಕಿ ರೊಟ್ಟಿ#Saakshatv #cooking #recipe #akkirotti https://t.co/ysOLkfdWyi
— Saaksha TV (@SaakshaTv) August 3, 2021
#Saakshatvcookingrecipe #thondekayiricebath








