ಕೇವಲ 11 ನಿಮಿಷ ಮಾತ್ರ ಅತ್ಯಾಚಾರ ನಡೆದಿತ್ತು ಎಂಬ ಕಾರಣಕ್ಕೆ ಇಳಿಕೆಯಾಯ್ತು ಜೈಲು ಶಿಕ್ಷೆ..!
ಸ್ವಿಟ್ಜರ್ಲೆಂಡ್ : ಕೇವಲ 11 ನಿಮಿಷಗಳ ಕಾಲ ಅತ್ಯಾಚಾರ ನಡೆದಿದೆ ಎಂಬುದರ ಆಧಾರದ ಮೇಲೆ ಸ್ವಿಡ್ಜರ್ ಲೆಂಡ್ ನಲ್ಲಿ ನ್ಯಾಯಾಲಯವು ವಿವಾದಾತ್ಮಕ ತೀರ್ಪನ್ನ ನೀಡಿದ್ದು, ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹೌದು.. ಅತ್ಯಾಚಾರ ಆರೋಪಿಯ ಶಿಕ್ಷೆಯನ್ನು ನ್ಯಾಯಾಲಯವು ಕಡಿಮೆ ಮಾಡಿದೆ. ಆದ್ರೆ ನ್ಯಾಯಾಲಯದ ಈ ತೀರ್ಪಿನ ಬಗ್ಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ.. ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಾ ನ್ಯಾಯಾಲಯದ ತೀರ್ಪಿನ ವಿರುದ್ಧ ಧ್ವನಿ ಎತ್ತಿದ್ದಾರೆ,.. ಅಲ್ಲದೇ ಇಂತಹ ನಿರ್ದಾರದಿಂದಾಗಿ ಮುಂದಿನ ದಿನಗಳಲ್ಲಿ ಅತ್ಯಾಚಾರಿಗಳು ಅಪರಾಧ ಎಸಗುವ ಮುನ್ನ ಯಾರಿಗೂ ಹೆದರದೇ ಇರುವುದಕ್ಕೂ ಪ್ರಚೋದನೆ ನೀಡುತ್ತದೆ ಎಂದು ಆರೋಪಿಸಿ ಆಕ್ರೋಶ ಹೊರಹಾಕ್ತಾ ಇದ್ದಾರೆ..
ಏನಿದು ಪ್ರಕರಣ..?
ಮಹಿಳೆಯೊಬ್ಬಳ ( ವಯಸ್ಸು ತಿಳಿದುಬಂದಿಲ್ಲ ) ಮೇಲೆ ವಾಯುವ್ಯದಲ್ಲಿರುವ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಪೋರ್ಚುಗಲ್‌ನ 33 ವರ್ಷದ ವ್ಯಕ್ತಿ ಮತ್ತು 17 ವರ್ಷದ ಆತನ ಅಪ್ರಾಪ್ತ ಸ್ನೇಹಿತ ಸೇರಿ ಅತ್ಯಾಚಾರವೆಸಗಿದ್ದರು.. ಅಪರಾಧವು ಫೆಬ್ರವರಿ 2020 ರಲ್ಲಿ ನಡೆದಿತ್ತು.. 33 ವರ್ಷದ ಆರೋಪಿಗೆ ಆಗಲೇ ತೀರ್ಪು ಪ್ರಕಟಿಸಲಾಗಿತ್ತು. ಆದ್ರೆ ಅಪ್ರಾಪ್ತಿನಿಗೆ ಇನ್ನೂವರೆಗೂ ತೀರ್ಪು ಕಾಯ್ದಿರಿಸಿಲಾಗಿದೆ.. ಈ ನಡುವೆ 33 ವರ್ಷದ ಆರೋಪಿಯ ಶಿಕ್ಷೆಯನ್ನ ಸುಮಾರು 1 ವರೆ ವರ್ಷ ಕಡಿಮೆ ಮಾಡಿ ನ್ಯಾಯಾಲಯವು ಆದೇಶ ಹೊರಡಿಸಿದೆ.. ಇದಕ್ಕೆ ನ್ಯಾಯಾಲಯವು ಕೊಟ್ಟ ಕಾರಣ ಜನರನ್ನ ದಂಗಾಗಿಸಿದೆ.
ಹೌದು.. 51 ತಿಂಗಳಿಂದ 36 ತಿಂಗಳುಗಳಿಗೆ ಜೈಲು ಅವಧಿಯನ್ನು ಕಡಿಮೆ ಮಾಡುವುದಕ್ಕೆ ಕಾರಣ ಕೊಟ್ಟಿರುವ ನ್ಯಾಯಾಲಯವು ಲೈಂಗಿಕ ದೌರ್ಜನ್ಯವು ಕೇವಲ 11 ನಿಮಿಷಗಳ ಕಾಲ ನಡೆದಿದೆ. ಸಂತ್ರಸ್ತೆಯನ್ನು ಗಂಭೀರವಾಗಿ ಗಾಯಗೊಳಿಸಿಲ್ಲ ಎಂದು ಹೇಳಿರುವ ಸ್ವಿಟ್ಜರ್ಲೆಂಡ್‌ನ ನ್ಯಾಯಾಲಯವು ಅಪರಾಧಿ ಅತ್ಯಾಚಾರಿಗಳ ಜೈಲು ಶಿಕ್ಷೆಯನ್ನು ಕಡಿಮೆ ಮಾಡಲು ಆದೇಶ ನೀಡಿದೆ ಎಂದು ಸ್ವಿಸ್ ಇನ್ಫೋ ವರದಿ ಮಾಡಿದೆ.
ಈ ತೀರ್ಪು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.. ನೂರಾರು ಜನರು ಬಾಸೆಲ್ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಾಸೆಲ್ ನ್ಯಾಯಾಲಯದ ಮುಖ್ಯ ನ್ಯಾಮೂರ್ತಿಗಳಾದ ಲಿಸೆಲೊಟ್ ಹೆಂಜ್ ಅವರು ಅತ್ಯಾಚಾರಿಗಳ ಶಿಕ್ಷೆಯನ್ನು 4 ವರ್ಷ ಮತ್ತು 3 ತಿಂಗಳಿಂದ 3 ವರ್ಷಕ್ಕೆ ಇಳಿಸುವ ಆದೇಶ ಹೊರಡಿಸಿದ್ದಾರೆ.








