ಸರ್ಕಾರಿ ಸಭೆ-ಸಮಾರಂಭಗಳಿಗೆ ಹೊಸ ರೂಲ್ಸ್ – ಸಿಎಂ ಬೊಮ್ಮಾಯಿ ಆದೇಶ
ಬೆಂಗಳೂರು: ಕೊರೊನಾ ಹಾವಳಿ ಹಿನ್ನೆಲೆ , ಸೋಂಕು ಪ್ರಮಾಣ ಹೆಚ್ಚಳಕ್ಕೆ ಕಡಿವಾಣ ಹಾಕಲು ಸರ್ಕಾರ ನಾನಾ ಕ್ರಮಗಳನ್ನ ಕೈಗೊಳ್ತಿದೆ.. ಈ ನಡುವೆ ಕೋವಿಡ್ 3ನೇ ಅಲೆಯ ಭೀತಿ ಬೇರೆ ಎದುರಾಗಿದ್ದು, ಸರ್ಕಾರಿ ಸಭೆ-ಸಮಾರಂಭಗಳಿಗೆ ಹೊಸ ನಿಯಮಗಳನ್ನ ಜಾರಿಗೊಳಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ..
ಅನಗತ್ಯ ಖರ್ಚುಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಡಿವಾಣ ಹಾಕಿದ್ದು, ಹಾರ ತುರಾಯಿ ತರದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೇ ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡವೆಂದು ತಿಳಿಸಿದ್ದಾರೆ.
ಮಂತ್ರಿಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ : `ಸೈನಿಕ’ನ ಪರ ರೇಣುಕಾಚಾರ್ಯ ಬ್ಯಾಟ್
ಇನ್ನು ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ತರುವುದು ಬೇಡ. ಅನಗತ್ಯವಾಗಿ ಖರ್ಚು ವೆಚ್ಚ ಮಾಡುವುದು ಬೇಡವೆಂದು ಸಿಎಂ ಸೂಚಿಸಿದ್ದಾರೆ. ಅನಗತ್ಯ ಖರ್ಚುವೆಚ್ಚ ಮಾಡದಂತೆ ಸಿಎಂ ಸೂಚಿಸಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಹಾರ ತುರಾಯಿ, ಪೇಟ, ಶಾಲು, ನೆನಪಿನ ಕಾಣಿಕೆ ನೀಡಬಾರದು. ಆದರೆ ಕನ್ನಡ ಪುಸ್ತಕಗಳನ್ನು ನೀಡಿ ಗೌರವಿಸಬಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.