ಸಾಮಾಜಿಕ ನ್ಯಾಯದ ಮೇಲೆ ಗೌರವ ಇಲ್ಲದವರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾ..? – ಸಿದ್ದರಾಮಯ್ಯ
ಸಚಿವ ಆನಂದ್ ಸಿಂಗ್ ರಾಜಿನಾಮೆ ಸುಳಿವು ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಇದು ಬಿಜೆಪಿ ಸಂಪುಟ ರಚನೆಯಲ್ಲಿ ಮನಸ್ಥಾಪ ಇದೆ ಅನ್ನೊದನ್ನ ತೋರಿಸ್ತಿದೆ. ಸಂಪುಟ ರಚನೆ ವೇಳೆಯೇ ಅಸಮಾಧಾನ ಹೊಗೆಯಾಡ್ತಿತ್ತು. ಮುಂದೆ ಅದು ಜ್ವಾಲೆಯಾಗಿ ಸ್ಪೋಟ ಆಗೋ ಲಕ್ಷಣ ಇದೆ. ಯಾರಿಗೆ ಸಾಮಾಜಿಕ ನ್ಯಾಯದ ಮೇಲೆ ಗೌರವ ಇಲ್ಲವೋ. ಅಂತವರ ಕೈಯಲ್ಲಿ ಉತ್ತಮ ಆಡಳಿತ ಕೊಡಲು ಹೇಗೆ ಸಾಧ್ಯ ಎಂದಿದ್ದಾರೆ..
ಇದೇ ವೇಳೆ ಜಮೀರ್ ಜೊತೆಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡ್ರು ಎಂಬ ವಿಚಾರವಾಗಿ ಮಾತನಾಡಿ ಎಲ್ಲವನ್ನೂ ನೀವೆ ಸೃಷ್ಠಿ ಮಾಡ್ಕೊಳ್ತೀರಾ, ಆ ರೀತಿ ಏನೂ ಆಗಿಲ್ಲ, ಜಮೀರ್ ಅಜ್ಮೀರ್ ಗೆ ಹೋಗಿದ್ರು ಎಮದು ಮಾಧ್ಯದಮವರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ಜಮೀರ್ ಭೇಟಿ ಮಾಡಿರುವ ವಿಚಾರದಲ್ಲಿ ಯಾವುದೇ ಬಣ್ಣ ಕಟ್ಟುವ ಅಗತ್ಯವಿಲ್ಲ. ಅವರು ಪಕ್ಷದ ಅಧ್ಯಕ್ಷನಾಗಿ ಹೋಗಿ ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.








