ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐದು ಕ್ರಿಕೆಟ್ ಚೆಂಡುಗಳ ತೂಕ..100 ಕಿಲೋ ಮೀಟರ್ ವೇಗ.. ನಾಲ್ಕು ಕ್ರಿಕೆಟ್ ಪಿಚ್‍ಗಳ ಉದ್ದ.. ಇದು ನೀರಜ್ ನ ರಟ್ಟೆಯ ಪವರ್..!

admin by admin
August 12, 2021
in Newsbeat, Sports, ಕ್ರೀಡೆ
neeraj chopra saakshatv
Share on FacebookShare on TwitterShare on WhatsappShare on Telegram

ನೀ..ರಾಜ ಗೆದ್ದ ಬಂಗಾರ ಅಂತಿಂಥದ್ದಲ್ಲ.. ಬಿಲ್ಲು -ಬಾಣದಂತೆ ಬಾಗುವ ನಿನ್ನ ದೇಹ ಸಿರಿಯ ಗುಟ್ಟು ಇದೇನಾ…?

ಐದು ಕ್ರಿಕೆಟ್ ಚೆಂಡುಗಳ ತೂಕ..100 ಕಿಲೋ ಮೀಟರ್ ವೇಗ.. ನಾಲ್ಕು ಕ್ರಿಕೆಟ್ ಪಿಚ್‍ಗಳ ಉದ್ದ.. ಇದು ನೀರಜ್ ನ ರಟ್ಟೆಯ ಪವರ್..!

Related posts

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

June 25, 2026
ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

June 25, 2026

ಫಿನ್ನಿಷ್ ಗ್ರಿಪ್… ಇದು ನೀರಜ್ ಚೋಪ್ರಾ ಜಾವೆಲಿನ್ ಎಸೆತದ ಗುಟ್ಟು..!

ನೀರಜ್ ಚೋಪ್ರಾ ಅಭ್ಯಾಸ ಮಾಡುವಾಗ ಕಾಂಗರೂ ಹರ್ಡಲ್ರ್ಸ್ ಜಂಪಿಂಗ್ ನ ಹಿಂದಿನ ಮರ್ಮಾ ಏನು ?

neeraj chopra javelin gold at Tokyo 2021 saakshatvಕೈಯಲ್ಲಿ 800 ಗ್ರಾಂ ತೂಕ ಮತ್ತು 8 ಅಡಿ 10 ಇಂಚು ಉದ್ದದ ಜಾವೆಲಿನ್..! ಫಿನ್ನಿಷ್ ಹಿಡಿತದೊಂದಿಗೆ ಸರಿ ಸುಮಾರು 15-16 ಹೆಜ್ಜೆಗಳ ರನ್ ಅಪ್..! ದೇಹವನ್ನು 32 ಡಿಗ್ರಿ ಮತ್ತು 36 ಡಿಗ್ರಿ ನಡುವೆ ಬಾಗಿ ಎಸೆದಿರುವ ವೇಗ ಅಂದಾಜು 100 ಕೀಲೋ ಮೀಟರ್..! ಕ್ರಮಿಸಿದ ದೂರ 87.58 ಮೀಟರ್..!
ಇಷ್ಟು ಸಾಕಾಗಿತ್ತು.. ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆಲ್ಲಲು..! ಹೌದು, ಸುಬೇದಾರ್ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಕೋಟಿ ಕೋಟಿ ಭಾರತೀಯರನ್ನು ಹರುಷದಿಂದ ತೇಲಾಡುವಂತೆ ಮಾಡಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆಲ್ಲುವುದು ಅಂದ್ರೆ ಅದು ಗಗನ ಕುಸುಮವಾಗಿರುತ್ತಿತ್ತು. ಅಷ್ಟೇ ಯಾಕೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದೇ ದೊಡ್ಡ ಸಾಧನೆಯಾಗಿತ್ತು. ಅಂತಹುದರಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಏಳು ಪದಕಗಳನ್ನು ಗೆದ್ದುಕೊಂಡಿದೆ. ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿರುವ ಭಾರತ, 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ಬಂದಿದೆ.
ಹಾಗೇ ನೋಡಿದ್ರೆ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಚಿನ್ನ ಗೆಲ್ಲುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದ್ರೂ ಚಿನ್ನದ ಮೇಲೆ ಗುರಿ ಇಟ್ಟಿದ್ದ ನೀರಜ್ ಚೋಪ್ರಾ ಅವರ ಗುರಿ ತಪ್ಪಲಿಲ್ಲ. ಕನಸು ಹುಸಿಯಾಗಲಿಲ್ಲ. ಆರು ವರ್ಷಗಳ ಕಠಿಣ ಅಭ್ಯಾಸದ ತಪಸ್ಸಿಗೆ ತಕ್ಕ ಪ್ರತಿಫಲವೇ ಸಿಕ್ಕಿದೆ.

Neeraj chopra saaksha tv ಹೌದು, ನೀರಜ್ ಚೋಪ್ರಾ ಅಂದ್ರೆ ಆತ್ಮ ವಿಶ್ವಾಸಕ್ಕೆ ಮತ್ತೊಂದು ಹೆಸರು.. ಯಾಕಂದ್ರೆ ನೀರಜ್ ತಾನು ಎಸೆದಿರುವ ಈಟಿ ಎಷ್ಟು ದೂರ ಹೋಗುತ್ತಿದೆ ಅನ್ನೋದನ್ನು ನೋಡುವುದಿಲ್ಲ. ತಾನು ಹೇಗೆ ಎಸೆಯುತ್ತೇನೆ ಅನ್ನೋದು ಮಾತ್ರ ಅವರ ಗುರಿಯಾಗಿರುತ್ತದೆ. ಹಾಗಾಗಿಯೇ ಎಸೆದ ನಂತರ ನೆಲಕ್ಕೆ ಬಿದ್ರೂ ಹಿಂತಿರುಗಿ ನೋಡುವುದಿಲ್ಲ. ಬದಲಾಗಿ ಎಸೆದಿರುವುದು ಸರಿಯಾಗಿದ್ರೆ ಕ್ಷಣ ಮಾತ್ರದಲ್ಲೇ ಕೈಯನ್ನು ಮೇಲೆತ್ತಿ ಸಂಭ್ರಮಿಸುತ್ತಾರೆ. ಆದಾದ ನಂತರ ಎಷ್ಟು ದೂರ ಕ್ರಮಿಸಿದೆ ಎಂಬುದನ್ನು ನೋಡುತ್ತಾರೆ. ಅದಕ್ಕೆ ಅಂದಿರುವುದು ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು ನೀರಜ್ ಚೋಪ್ರಾ ಅಂತ.

ಅಂದ ಹಾಗೇ, ನೀರಜ್ ಚೋಪ್ರಾ ಅವರ ಈ ಐತಿಹಾಸಿನ ಸಾಧನೆಯ ಮೆರವಣಿಗೆಯ ಹಿಂದೆ ಅಪಾರವಾದ ಶ್ರಮವಿದೆ. ಅಪಮಾನಗಳ ಕೋಪವಿದೆ. ಬೊಜ್ಜು ಹುಡುಗ ಅಂತ ಹೀಯಾಳಿಸಿದಾಗ ಕಣ್ಣೀರು ಸುರಿಸಿದ್ದು ಇದೆ. 11ರ ಹರೆಯದಲ್ಲೇ ವಯಸ್ಸಿಗೂ ಮೀರಿದ ತೂಕವಿದ್ದ ನೀರಜ್ ಚೋಪ್ರಾ, ತನ್ನ ದೇಹದ ಬೊಜ್ಜು ಕರಗಿಸಲು ಪಾಣಿಪತ್ ಜಿಮ್ ಸೇರಿಕೊಂಡಿದ್ದರು. ಆಕಸ್ಮಿಕವಾಗಿ ನೀರಜ್ ಚೋಪ್ರಾ ಅವರು ಪಾಣಿಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ ಕೊಟ್ಟಿದ್ದರು. ಆಗ ಜಾವೇಲಿನ್ ಎಸೆತಗಾರ ಜೈವೀರ್ ಚೌಧರಿ ಅವರ ಕಣ್ಣಿಗೆ ಬಿದ್ದರು. ಯಾವುದೇ ಜಾವೆಲಿನ್ ಎಸೆತದ ತರಬೇತಿ ಇಲ್ಲದ ನೀರಜ್ 40 ಮೀಟರ್ ದೂರ ಎಸೆದಾಗ ಈ ಹುಡುಗನಲ್ಲಿ ಪ್ರತಿಭೆ ಇದೆ ಅಂತ ಜೈವೀರ್ ಚೌಧರಿಗೆ ಅನ್ನಿಸಿತ್ತು. ನಂತರ ಬೊಜ್ಜು ಹುಡುಗನ ಕೈಗೆ ಬಂದಿದ್ದು ಈಟಿ. ನಂತರ ಹಿಂತಿರುಗಿ ನೋಡಲೇ ಇಲ್ಲ. ತನ್ನನ್ನು ಹೀಯಾಳಿಸಿ ಅಪಮಾನ ಮಾಡಿದವರಿಗೂ ಈಟಿಯಿಂದ ಸಾಧನೆ ಮಾಡಿ ಚುಚ್ಚಿದ್ರು. ಕೊನೆಗೆ ಒಲಿಂಪಿಕ್ಸ್ ಬಂಗಾರದ ಪದಕಕ್ಕೂ ಅದೇ ಈಟಿಯಿಂದಲೇ ಚುಚ್ಚಿಸಿಕೊಂಡು ಕೊರಳಿಗೆ ಹಾರವನ್ನಾಗಿಸಿದ್ರು.
 javelin grip saakshatv v gripಕಳೆದ ಹತ್ತು ವರ್ಷಗಳಿಂದ ಪ್ರತಿ ದಿನ ಐದಾರು ಗಂಟೆಗಳ ಕಾಲ ಮೈದಾನದಲ್ಲಿ ಬೆವರು ಸುರಿಸುತ್ತಿರುವ ನೀರಜ್ ಚೋಪ್ರಾ ತನ್ನ ದೇಹವನ್ನು ದಂಡಿಸುತ್ತಿರುವಾಗ ಪಟ್ಟ ಕಷ್ಟ, ನೋವುಗಳು ಅವರಿಗೆ ಮಾತ್ರ ಗೊತ್ತು. ಆರು ಅಡಿ ಎತ್ತರ, 86 ಕೆಜಿ ತೂಕವಿರುವ ನೀರಜ್ ಚೋಪ್ರಾ ಬಿಲ್ಲು -ಬಾಣದಂತೆ ತನ್ನ ದೇಹವನ್ನು ಬಾಗಿಸುತ್ತಾರೆ
ಅಷ್ಟಕ್ಕೂ ಜಾವೆಲಿನ್ ಎಸೆತಕ್ಕೆ ಶಕ್ತಿ ಮಾತ್ರ ಸಾಕಾಗುವುದಿಲ್ಲ. ಯುಕ್ತಿಯೂ ಬೇಕು. ಕೈ – ಬೆರಳು, ಭುಜ, ತಲೆ, ಪಾದದ ಚಲನೆಯ ಜೊತೆಗೆ ಇಡೀ ದೇಹದ ಶಕ್ತಿಯನ್ನು ಪ್ರಯೋಗಿಸಿ ಎಸೆಯಬೇಕು. ಅಷ್ಟೇ ಅಲ್ಲ, ಕೌಶಲ್ಯವೂ ಇರಲೇಬೇಕು.
ಸಾಮಾನ್ಯವಾಗಿ ಜಾವೆಲಿನ್ ಎಸೆಯುವಾಗ ಹಿಡಿತ (ಗ್ರಿಪ್) ಬಹಳ ಪ್ರಮುಖವಾದ ಪಾತ್ರ ವಹಿಸುತ್ತಿದೆ. ಸದ್ಯದ ಜಾವೆಲಿನ್ ಎಸೆತಗಾರರು ಮೂರು ಮಾದರಿಯ ಗ್ರಿಪ್ ಗಳನ್ನು ಅನುಸರಿಸುತ್ತಾರೆ. ಮೊದಲನೇಯದ್ದು ಫೋರ್ಕ್ ಅಥವಾ ವಿ ಗ್ರಿಪ್. ಈ ಗ್ರಿಪ್ ನಲ್ಲಿ ಜಾವೆಲಿನ್ ಅನ್ನು ಅಂಗೈಗೆ ಅಡ್ಡವಾಗಿ ಹಿಡಿಯಲಾಗುತ್ತದೆ. ತೋರು ಬೆರಳಿನ ಮೇಲೆ ಹೆಬ್ಬೆರಳು ಇರುತ್ತದೆ. ಮಧ್ಯದ ಬೆರಳು ಗ್ರಿಪ್ ನ ಮೇಲಿನ ಭಾಗದಲ್ಲಿದ್ದು ಮತ್ತುತೋರು ಬೆರಳಿನ ಮಧ್ಯದಲ್ಲಿರುತ್ತದೆ. ಇನ್ನುಳಿದ ಉಂಗುರ ಬೆರಳು ಮತ್ತು ಕಿರು ಬೆರಳುಗಳು ಗ್ರಿಪ್ ನ ಕೆಳಭಾಗದಲ್ಲಿರುತ್ತವೆ.
ಇನ್ನು ಅಮೆರಿಕನ್ ಗ್ರಿಪ್ – ಇದು ಸುಲಭವಾದ ಗ್ರಿಪ್. ಆದ್ರೆ ಸರಿಯಾಗಿ ಹಿಡಿದುಕೊಂಡು ಎಸೆಯಬೇಕು. ಇಲ್ಲದಿದ್ರೆ ಮೊಣಕೈ, ಭುಜಕ್ಕೆ ಗಾಯವಾಗುವ ಸಾಧ್ಯತೆಗಳೂ ಇವೆ. ಅಂಗೈನಲ್ಲಿ ಜಾವೆಲಿನ್ ಅನ್ನು ಲಘುವಾಗಿ ಹಿಡಿದುಕೊಳ್ಳಬೇಕು. ತೋರು ಬೆರಳು ಗ್ರಿಪ್ ನ ಮೆಲ್ಬಾಗದಲ್ಲಿ ಮತ್ತು ಹೆಬ್ಬೆರಳನ್ನು ಹಿಡಿತ ಮೆಲ್ಬಾಗದಲ್ಲಿ ಹಿಡಿದಿಟ್ಟುಕೊಳ್ಳಬೇಕು. ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಕಿರು ಬೆರಳು ಗ್ರಿಪ್ ನ ಮಧ್ಯದಲ್ಲಿರಬೇಕು.
ಫಿನ್ನಿಷ್ ಗ್ರಿಪ್ – ನೀರಜ್ ಚೋಪ್ರಾ ಅವರು ಫಿನ್ನಿಶ್ ಗ್ರಿಪ್ ಮೂಲಕವೇ ಜಾವೆಲಿನ್ ಅನ್ನು ಎಸೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜಾವೆಲಿನ್ ಎಸೆತಗಾರರು ಈ ಗ್ರಿಪ್ ಅನ್ನು american grip saakshatv javelinಅನುಸರಿಸುತ್ತಾರೆ. ಆದ್ರೆ ಇದನ್ನು ಕರಗತ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಿಲ್ಲ. ಒಂದು ಬಾರಿ ಈ ಮಾದರಿಯ ಮೇಲೆ ಹಿಡಿತ ಸಾಧಿಸಿಕೊಂಡ್ರೆ ಇದರಿಂದ ಪ್ರಯೋಜನ ಜಾಸ್ತಿಯಾಗುತ್ತದೆ. ಇದು ಹೆಚ್ಚು ಸುರಕ್ಷಿತ ಮಾದರಿ ಕೂಡ ಹೌದು. ಇದು ಸ್ವಲ್ಪ ಅಮೆರಿಕನ್ ಗ್ರಿಪ್ ರೀತಿಯಲ್ಲೇ ಇರುತ್ತದೆ. ಹೆಬ್ಬೆರಳು ಮತ್ತು ಮಧ್ಯದ ಬೆರಳು ಹಿಡಿತದ ಮೇಲಿನ ಭಾಗದಲ್ಲಿರುತ್ತದೆ. ಉಂಗುರ ಬೆರಳು ಮತ್ತು ಕಿರು ಬೆರಳು ಹಿಡಿತ ಮಧ್ಯ ಭಾಗದಲ್ಲಿರುತ್ತೆ. ತೋರು ಬೆರಳು ಗ್ರಿಪ್ ನ ಹೊರಗಡೆ ಇರುತ್ತದೆ.
ಜಾವೆಲಿನ್ ಗ್ರಿಪ್ ನ ನಂತರ ರನ್ನಪ್ ಕೂಡ ಮುಖ್ಯವಾದದ್ದು. ನೀರಜ್ ಚೋಪ್ರಾ ಅವರು ಸರಿ ಸುಮಾರು 15 ಹೆಜ್ಜೆಗಳ ರನ್ ಅಪ್ ಮಾಡುತ್ತಾರೆ. ರನ್ನಪ್ ವೇಳೆಯಲ್ಲಿ ಎರಡು ಅಥವಾ ಮೂರು ಸೈಡ್ ಸ್ಟೆಪ್ಸ್ ಗಳಿರುತ್ತವೆ. ಇದನ್ನು ಕ್ರಾಸ್ ಓವರ್ ಅಂತ ಕರೆಯಲಾಗುತ್ತದೆ. ಈ ವೇಳೆಯಲ್ಲಿ ಬೆನ್ನಿನ ಮೇಲೆ ಹೆಚ್ಚು ಭಾರವನ್ನು ಹಾಕಬೇಕಾಗುತ್ತದೆ. ಕ್ರಿಕೆಟ್ ಆಟದಲ್ಲಿ ಬೌಲರ್ ಚೆಂಡನ್ನು ಎಸೆಯುವಂತೆ ಇಲ್ಲೂ ಕೂಡ ಅನುರಿಸಬೇಕಾಗುತ್ತದೆ.
ಹೀಗೆ ಗ್ರಿಪ್, ರನ್ನಪ್, ಕ್ರಾಸ್ ಓವರ್ ಮೂಲಕ ಅಂತಿಮ ಹಂತದಲ್ಲಿ ಕ್ರೀಡಾಪಟುವಿನ ಕೈ ಕಾಲಿನ ಚಲನೆಯಿಂದ ಎಸೆಯುವ ರಭಸಕ್ಕೆ ಜಾವೆಲಿನ್‍ಗೆ ಕರೆಂಟ್ ಕೊಟ್ಟಂತೆ ಆಗುತ್ತದೆ. ಅಂತಿಮ ಹಂತದಲ್ಲಿ ಎಸೆಯುವವಾಗ ಒಂದು ಕೈಯಲ್ಲಿ ಜಾವೆಲಿನ್ ಇರುತ್ತೆ. ಮತ್ತೊಂದು ಕೈಯನ್ನು ಆದಷ್ಟು ಮೇಲಕ್ಕೆತ್ತಬೇಕು.
ಒಟ್ಟಿನಲ್ಲಿ 800 ಗ್ರಾಮ್ ಭಾರ, 8.10 ಅಡಿ ಉದ್ದವಿರುವ ಜಾವೆಲಿನ್ ಎಸೆಯುವಾಗ ಗ್ರಿಪ್, ರನ್ನಪ್, ಕ್ರಾಸ್ ಓವರ್, ಲೋಡ್ ಅಪ್, ರಿಲೀಸ್ ಮಾಡೋದು.. ಹೀಗೆ ಪ್ರತಿ ಕೌಶಲ್ಯಗಳಲ್ಲೂ ಪರಿಣತಿ ಪಡೆದಿರಬೇಕು. ನೋಡೋಕೆ ಜಾವೆಲಿನ್ ಎಸೆತ ಸರಳವಾಗಿ ಕಾಣುತ್ತದೆ. ಈಟಿಯನ್ನು ಹಿಡಿದುಕೊಂಡು ಓಡುವುದು.. ಎಸೆಯುವುದು ಅಂತ ಹೇಳೋಕೆ ಸುಲಭ, ಆದ್ರೆ ಅದರಲ್ಲಿ ಸಾಧನೆ ಮಾಡಬೇಕಾದ್ರೆ ಕಠಿಣ ಶ್ರಮಪಡಲೇಬೇಕು. ಬುದ್ಧಿಯೂ ಬೇಕು. ಶಕ್ತಿಯೂ ಬೇಕು.
saakshatv finnish grip javelinಈ ಎಲ್ಲಾ ತಾಂತ್ರಿಕತೆಗಳನ್ನು ಕರಗತ ಮಾಡಿಕೊಂಡಿರುವ ನೀರಜ್ ಚೋಪ್ರಾ ಅವರು ದೇಹವನ್ನು ದಂಡಿಸುವ ರೀತಿಯೂ ಅಷ್ಟೇ ಕಠಿಣವಾಗಿದೆ. ಕೇವಲ ದೇಹವನ್ನು ಬಲಿಷ್ಠಗೊಳಿಸಲು ಜಿಮ್ ನಲ್ಲಿ ಕಸರತ್ತು ನಡೆಸಿದ್ರೆ ಸಾಕಾಗುವುದಿಲ್ಲ. ಮೈದಾನದಲ್ಲಿ ಓಡಬೇಕು. ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಫಿಟ್ ಆಂಡ್ ಫೈನ್ ಆಗಿರಬೇಕು. ಬೆನ್ನು, ಕೈ -ಕಾಲು, ಪಾದದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿಯೇ ನೀರಜ್ ಚೋಪ್ರಾ ಅವರು ಕಾಂಗರೂ (ಜಂಪಿಂಗ್) ಹರ್ಡಲ್ರ್ಸ್ ಮೇಲೆ ಜಿಗಿದುಕೊಂಡು ಅಭ್ಯಾಸ ನಡೆಸುತ್ತಾರೆ. ದೇಹವನ್ನು ಬಾಣ -ಬಿಲ್ಲಿನಂತೆ ಬಾಗಿಸುವ ಕಲೆಯನ್ನೂ ರೂಢಿಸಿಕೊಂಡಿದ್ದಾರೆ. ಯಾಕಂದ್ರೆ ಜಾವೆಲಿನ್ ಬಾಣವಾದ್ರೆ, ದೇಹ ಬಿಲ್ಲು ಆಗಿರುತ್ತದೆ. ಹಾಗಾದಾಗ ಮಾತ್ರ ಅದ್ಭುತ ಜಾವೆಲಿನ್ ಎಸೆತಗಾರನಾಗಲು ಸಾಧ್ಯ.
ಇನ್ನು ನಾವು ಕ್ರಿಕೆಟ್ ನಲ್ಲಿ ಬೌಲರ್ ಒಬ್ಬ ಗಂಟೆಗೆ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದಾಗ ಎಂಥಾ ಸ್ಪೀಡ್ ನಲ್ಲಿ ಬೌಲಿಂಗ್ ಮಾಡುತ್ತಾನೆ ಅಂತ ಹೇಳುತ್ತೇವೆ. ಬ್ರೆಟ್ ಲೀ, ಶೋಯಿಬ್ ಅಖ್ತರ್ ಎಸೆತಗಳನ್ನು ಬೆಂಕಿಯ ಚೆಂಡು ಅಂತ ಹೇಳುತ್ತೇವೆ.
ಆದ್ರೆ ನಮ್ಮ ನೀರಜ್ ಚೋಪ್ರಾ ಅವರಿಗಿಂತ ಏನು ಕಮ್ಮಿ ಇಲ್ಲ. ಕಮ್ಮಿ ಇಲ್ಲ ಅಲ್ಲ.. ಅವರಿಗಿಂತ ನಾಲ್ಕರಷ್ಟು ಶಕ್ತಿ ನೀರಜ್ ಚೋಪ್ರಾನಲ್ಲಿದೆ. ಭಾರತದ ಬಂಗಾರ ನೀರಜ್ ಚೋಪ್ರಾ ಅವರು ಸುಮಾರು 100 ಕಿಲೋ ಮೀಟರ್ ವೇಗದಲ್ಲಿ ಐದು ಕ್ರಿಕೆಟ್ ಚೆಂಡುಗಳ ತೂಕವನ್ನು ನಾಲ್ಕು ಕ್ರಿಕೆಟ್ ಪಿಚ್ ಗಳ ಉದಕ್ಕೆ ಎಸೆದಿದ್ದಾರೆ. ಅರ್ಥವಾಗಿಲ್ವಾ.. ಕ್ರಿಕೆಟ್ ಚೆಂಡಿನ ತೂಕ 163 ಗ್ರಾಮ್. ಪುರುಷರ ಜಾವೆಲಿನ್ ತೂಕ 800 ಗ್ರಾಮ್. ಇನ್ನು ಕ್ರಿಕೆಟ್ ಪಿಚ್ ನ ದೂರ 20.12 ಮೀಟರ್. ಟೋಕಿಯೋ ಒಲಿಂಪಿಕ್ಸ್ ನಲ್ಲಿ ನೀರಜ್ ಎಸೆದಿರುವುದು 87.53 ಮೀಟರ್. ಲೆಕ್ಕ ಹಾಕಿ.. ಗೊತ್ತಾಗುತ್ತೆ ಅಂತ ಅಂದುಕೊಂಡಿದ್ದೇನೆ.
(ವಿಶೇಷ ಸೂಚನೆ – ಜಾವೆಲಿನ್ ಎಸೆತದ ತಾಂತ್ರಿಕ ಕೌಶಲ್ಯಗಳ ಬಗ್ಗೆ ಲೋಪಗಳು ಇದ್ರೆ ಕ್ಷಮಿಸಿ- ಸಲಹೆ ಕೊಡಿ ಸರಿಪಡಿಸಿಕೊಳ್ಳುತ್ತೇನೆ)

Tags: #saakshatv#tokyo_olympics2021indiajavelin gripsjavelindayNeeraj ChopraSportsTokyoTokyo Olympic Games
ShareTweetSendShare
Join us on:

Related Posts

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

by Shwetha
June 25, 2026
0

ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

by Shwetha
June 25, 2026
0

ಅಮೆರಿಕ–ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಮಹತ್ವದ ಪ್ರಯಾಣ ಸಲಹೆ ನೀಡಿದೆ....

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

by Shwetha
June 25, 2026
0

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ; 2-3 ದಿನಗಳಲ್ಲಿ ಹೊಸ ಮಾರ್ಗಸೂಚಿ

by Shwetha
June 25, 2026
0

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಹೊಸ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು,...

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

by Shwetha
June 25, 2026
0

ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್ ಶಿಪ್ ವಿವಾದ ಈಗ ತಾರಕಕ್ಕೇರಿದೆ. ರಾಜಕೀಯ ಕೆಸರೆರಚಾಟದ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಎಂಟ್ರಿ ದೊಡ್ಡ ಸಂಚಲನ ಮೂಡಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram