ಸರ್ಕಾರದ ವಿರುದ್ಧ ಏಕಾಂಗಿ ಹೋರಾಟಕ್ಕಿಳಿದ ಎಂ.ಪಿ ಕುಮಾರಸ್ವಾಮಿ..!
ರಾಜ್ಯದ ಅತಿವೃಷ್ಟಿ ತಾಲೂಕುಗಳ ಪಟ್ಟಿಯಿಂದ ಮೂಡಿಗೆರಯನ್ನ ಕೈಬಿಡುವ ಮೂಲಕ ಮೂಡಿಗೆರೆ ತಾಲೂಕನ್ನ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಏಕಾಂಗಿಯಾಗಿಯೇ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ..
ಶಾಲಾ-ಕಾಲೇಜು ಆರಂಭ ವಿಚಾರ : ಸಿಎಂ ಪ್ರತಿಕ್ರಿಯೆ
ಹೌದು.. ಮೂಡಿಗೆರೆ ತಾಲೂಕು ಮಳೆಯಿಂದಾಗಿ ತೀವ್ರವಾಗಿ ಹಾನಿಗೊಂಡಿದೆ.. ಆದ್ರೆ ನಮ್ಮ ತಾಲೂಕನ್ನೇ ಅತಿವೃಷ್ಟಿಗೆ ಒಳಗಾದ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟು ಕಡೆಗಣಿಸಿರುವುದು ಎಷ್ಟು ಸರಿ ಎಂದು ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಎಂ.ಪಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.. ಅಲ್ಲದೇ ಖುದ್ದು ಆಡಳಿತ ಪಕ್ಷದ ಶಾಸಕರಾಗಿದ್ದುಕೊಂಡೇ ಸರ್ಕಾರದ ವಿರುದ್ಧ ಏಕಾಂಗಿಯಾಗಿಯೇ ಹೋರಾಟ ಮಾಡಲು ಮುಂದಾಗಿದ್ದಾರೆ..
ಟ್ವಿಟ್ಟರ್ ನಲ್ಲಿ `ರಾಜ’ಹುಲಿ ದಾಖಲೆ : ರಾಜ್ಯದ ಮೊದಲ ರಾಜಕಾರಣಿ
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿಯನ್ನು ಎಂ.ಪಿ.ಕುಮಾರಸ್ವಾಮಿ ನಡೆಸಲಿದ್ದಾರೆ. ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾದ ಬಿಜೆಪಿ ಶಾಸಕ ಕುಮಾರಸ್ವಾಮಿ ಮುಂದಾಗಿದ್ದಾರೆ. ಅಲ್ಲದೇ ಕಂದಾಯ ಸಚಿವರ ಧೋರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.








