ಕೇರಳದಲ್ಲಿ 2 ನೇ ಡೋಸ್ ಪಡೆದ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ – ಕರ್ನಾಟಕಕ್ಕೂ ಗಂಡಾಂತರ…!
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.. ಆದ್ರೆ ಆತಂಕಕಾರಿ ಸಂಗತಿ ಎಂದ್ರೆ ದೇಶದಲ್ಲಿ ದಾಖಲಾಗ್ತಿರುವ ಒಟ್ಟಾರೆ ಸೋಂಕಿತರ ಪೈಕಿ ಅರ್ಧದಷ್ಟು ಪಾಲು ನಮ್ಮದೇ ನೆರೆ ರಾಜ್ಯ ಕೇರಳದ್ದು.. ಇದು ಗಡಿ ರಾಜ್ಯವಾದ ಕರ್ನಾಟಕಕ್ಕೂ ಒಂದು ರೀತಿ ಆತಂಕಕಾರಿ ವಿಚಾರವೇ..
ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ..!
ಯಾಕಂದ್ರೆ ಗಡಿ ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸುವ ಜನರ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತೆ.. ಅದು ಅಲ್ಲದೇ ಕೇರಳ ಪರಿಸ್ಥಿತಿಯನ್ನ ನೋಡಿದ್ರೆ 3ನೇ ಅಲೆ ಶುರುವಾಗುವುದೂ ಕೂಡ ಕೇರಳದ ಮೂಲಕವೇ ಆದ್ರೂ ಆಶ್ಚರ್ಯ ಇಲ್ಲ.. ಈ ನಡುವೆ ಮತ್ತೊಂದು ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.. ಹೌದು ಕೇರಳದಲ್ಲಿ 2 ನೇ ಡೋಸ್ ಪಡೆದ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಹೀಗಾಗಿ ವ್ಯಾಕ್ಸಿನ್ ತೆಗೆದುಕೊಂಡಿರುವ ದೇಶದ ಜನರಲ್ಲಿ ಇದೀಗ ಆತಂಕ ಎದುರಾಗಿದೆ.
ಭೀಕರ ಅಪಘಾತ : ಒಂದೇ ಕುಟುಂಬದ ಐವರು ಸಾವು , ಇಬ್ಬರ ಸ್ಥಿತಿ ಗಂಭೀರ
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದವರಲ್ಲೂ ಸೋಂಕು ಸ್ಫೋಟಗೊಂಡಿದೆ. ಪತ್ತನಂತಿಟ್ಟು ಎಂಬಲ್ಲಿ ಸುಮಾರು 1.35 ಲಕ್ಷ ಕೊವೀಡ್ ಪ್ರಕ್ರರಣಗಳು ಪತ್ತೆಯಾಗಿವೆ. ಮೊದಲ ಡೋಸ್ ಪಡೆದ 14,974 ಮಂದಿಯಲ್ಲಿ ಸೋಂಕು ಪತ್ತೆಯಾದರೆ, 2ನೇ ಡೋಸ್ ಪಡೆದ ಬಳಿಕ 5042 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಾಂಗ್ರೆಸ್ ನಾಯಕ ಟ್ವಿಟ್ಟರ್ ಖಾತೆ ಲಾಕ್
ಕೇರಳದಲ್ಲಿ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಕಂಟೈನ್ಮೆಂಟ್ ಝೋನ್ ಮಾಡುವುದರಲ್ಲಿ ಕಟ್ಟುನಿಟ್ಟಿನ ಕ್ರಮ ಅಳವಡಿಸಿಕೊಳ್ಳದೇ ಇರುವುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಅದನ್ನು ಪಾಲಿಸಿಲ್ಲ. ಅಲ್ಲದೆ ಪರೀಕ್ಷೆಯ ಪ್ರಮಾಣವೂ ಕಡಿಮೆ ಇದೆ ಎಂದು ಕೇಂದ್ರದಿಂದ ಭೇಟಿ ನೀಡಿದ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ಅಭಿಪ್ರಾಯಪಟ್ಟಿದೆ. ಒಟ್ಟಿನಲ್ಲಿ 6 ಜನರ ತಂಡದ ಅಧ್ಯಯನದಲ್ಲಿ ಡೆಲ್ಟಾ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕೇರಳದಲ್ಲಿ 40 ಸಾವಿರ ಹೊಸ ರೀತಿಯ ಪ್ರಕರಣಗಳು ಪತ್ತೆಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ