ಸಿದ್ಧಿ ಸಮುದಾಯದ ಹೋರಾಟಗಾರ ಕರ್ನಾಟಕದ ನೆಲ್ಸನ್ ಮಂಡೇಲಾ ಡಿಯಾಗೋ ಬಸ್ತ್ಯಾವ್ ಸಿದ್ಧಿ ನಿಧನ
ಸಿದ್ಧಿ ಸಮುದಾಯದ ನಾಯಕ, ಹೋರಾಟಗಾರ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ ( ಹಳಿಯಾಳ ) ಡಿಯಾಗೋ ಬಸ್ತ್ಯಾವ್ ಸಿದ್ಧಿ ನಮ್ಮನ್ನಗಲಿದ್ದಾರೆ…
ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ ( ಹಳಿಯಾಳ ) ಡಿಯಾಗೋ ಬಸ್ತ್ಯಾವ್ ಸಿದ್ಧಿ ನಮ್ಮನ್ನಗಲಿದ್ದಾರೆ.
ಡಿಯಾಗೋ ಬಸ್ತ್ಯಾವ್ ಸಿದ್ಧಿ ತನ್ನ ಬದುಕಿನ ಪೂರ್ತಿ ಸಿದ್ಧಿ ಸಮುದಾಯದ ವಿಕಸನ, ಪಶ್ಚಿಮ ಘಟ್ಟದ ಅಡವಿ ಸಂರಕ್ಷಣೆ, ಸಮಾಜ ಸುಧಾರಣೆ, ಇದರ ಬಗ್ಗೆನೇ ಚಿಂತನೆ, ಹೋರಾಟ ಮಾಡುತ್ತಾ ಬಂದವರು ಮತ್ತು ಇದರಲ್ಲಿ ಸಂತೃಪ್ತಿ ಪಡೆದವರು.
ಡಿಯಾಗೋ ಬಸ್ತ್ಯಾವ್ ಸಿದ್ಧಿ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸದೇ ತನ್ನ ಸಮುದಾಯದ ಮತ್ತು ಸಮಾಜ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಚಿಂತಿಸುತ್ತಾ ಮತ್ತು ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದವರು. ಯಲ್ಲಾಪುರದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡುತ್ತಾ ಬಂದವರು. ಡಿಯಾಗೋ ಬಸ್ತ್ಯಾವ್ ಸಿದ್ಧಿ ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
#NelsonMandela #DiegoBastiaw








