ಅಶ್ಲೀಲತೆ ಪ್ರದರ್ಶನ : ಟ್ರೆಂಡಿಂಗ್ ನಲ್ಲಿ ‘ಬಾಯ್ಕಟ್ ರಾಧಿಕಾ ಆಪ್ಟೆ’..!
ಬಾಲಿವುಡ್ ಮಂದಿ ವಿರುದ್ಧ ಬಾಯ್ಕಟ್ ಘೋಷಣೆ ಹೊಸ ವಿಚಾರವೇನಲ್ಲ.. ಆಲಿಯಾ ಭಟ್ , ಅಮೀರ್ ಖಾನ್ , ಶಿಲ್ಪಾ ಶೆಟ್ಟಿ ಇಂದ ಹಿಡಿದು ಬಹುತೇಕರ ವಿರುದ್ಧ ನೆಟ್ಟಿಗರು ಬಾಯ್ಕಟ್ ಘೋಷಣೆ ಕೂಗಿದ್ದುಂಟು. ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಧಿಕಾ ಆಪ್ಟೆ ಬಾಲಿವುಡ್ ನಿಂದ ಬ್ಯಾನ್ ಮಾಡುವಂತೆ ನೆಟ್ಟಿಗರು ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಹೌದು ಬಂಗಾಳಿ, ಮರಾಠಿ, ತಮಿಳು, ತೆಲುಗು ಮಲಯಾಳಂ ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿರುವ ರಾಧಿಕಾ ಅಶ್ಲೀಲತೆ ಪ್ರದರ್ಶನ ಮಾಡ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಆಕ್ರೋಶ ಹೊರಹಾಕ್ತಿದ್ದಾರೆ.
ಬೋಲ್ಡ್ ಪಾತ್ರಗಳ ಮೂಕವೇ ಹೆಚ್ಚು ಗುರುತಿಸಿಕೊಂಡಿರುವ ರಾಧಿಕಾ ವಿರುದ್ಧ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ.. ಇಂಥವರಿಂದ ಅಶ್ಲೀಲತೆ ಪ್ರಚಾರವಾಗ್ತಿದೆ. ಇಂಥವರು ಭಾರತೀಯ ಸಂಸ್ಕೃತಿಗೆ ಮಾರಕ, ಹಿಂದೂ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ, ಬೆತ್ತಲಾಗುವ ಮೂಲಕ ಅಶ್ಲೀಲತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ರಾಧಿಕಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಪಾರ್ಚೆಡ್ ಸಿನಿಮಾದಲ್ಲಿ ರಾಧಿಕಾ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದರು.. ಈ ಸಿನಿಮಾದಲ್ಲಿ ಲೀಕ್ ಆಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿತ್ತು.. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.. ಇದೀಗ ಇದೇ ಸಿನಿಮಾದ ಫೋಟೋ ಶೇರ್ ಮಾಡಿ ರಾಧಿಕಾರನ್ನ ಬಾಯ್ಕಟ್ ಮಾಡುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಕಿಡಿ ಕಾರುತ್ತಿದ್ದಾರೆ.
ಅಂದಹಾಗೆ ಈ ಸಿನಿಮಾ ಬಿಡುಗಡೆಯಾಗಿ 5 ವರ್ಷಗಳಾಗಿದೆ. 2016ರಲ್ಲಿ ಪಾರ್ಚೆಡ್ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ಚಿತ್ರಮಂದಿರಕ್ಕೆ ಬರುವ ಮೊದಲೇ ಬೆತ್ತಲೆ ದೃಶ್ಯ ಲೀಕ್ ಆಗಿ ವೈರಲ್ ಆಗಿತ್ತು. ನಟ ಆದಿಲ್ ಹುಸೇನ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.








