ಎರಡೂ ಡೋಸ್ ಲಸಿಕೆ ಪಡೆದರೂ ಸೋಂಕು ದೃಢ : ಹೆಚ್ಚಿದ ಆತಂಕ
ಬೆಂಗಳೂರು : ನರಗದಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಆತಂಖಕ್ಕೆ ಕಾರಣವಾಗಿದೆ.
ನಗರದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಬದಲಾಗಿ ಮೂರನೇ ಅಲೆ ಈಗಾಗಲೇ ಶುರುವಾಗಿದ್ಯಾ..? ಅನ್ನೋ ಆತಂಕಕ್ಕೆ ಹೆಚ್ಚಿದೆ.
ಈ ಮಧ್ಯೆ ನಗರಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲೂ ಕೂಡ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಅಲ್ಲದೆ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ. ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಕೊರೊನಾ ಕಂಟ್ರೋಲ್ ಗೆ ಸರ್ಕಾರ ಕಠಿಣ ನಿರ್ದೇಶನಗಳನ್ನು ನೀಡಿದೆ. ಸದ್ಯಕ್ಕೆ ನೈಟ್ ಕಫ್ರ್ಯೂ ಮುಂದುವರೆಯಲಿದೆ. ದೇವಸ್ಥಾನ, ಸಭೆ, ಸಮಾರಂಭಗಳಿಗೆ ಇರುವ ನಿಬರ್ಂಧ ಮುಂದುವರೆಯಲಿದೆ.
ವೀಕೆಂಡ್ ಕಫ್ರ್ಯೂ ಜಾರಿ ಅನುಮಾನವಿದೆ. ಬೆಂಗಳೂರಿನಲ್ಲಿ ಸದ್ಯ 400ಕ್ಕಿಂತ ಕಡಿಮೆ ಪ್ರಕರಣಗಳಿದ್ದು, ಒಂದು ವೇಳೆ ಸೋಂಕು ಇನ್ನಷ್ಟು ಏರಿಕೆಯಾದರೆ ವೀಕೆಂಡ್ ಕಫ್ರ್ಯೂ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.









