ಅವರಿಬ್ಬರು ವಿಶ್ವ ದರ್ಜೆ ಪ್ಲೇಯರ್ಸ್ : ರಹಾನೆ, ಪೂಜಾರ ಪರ ರಾಹುಲ್ ಬ್ಯಾಟಿಂಗ್ rahul
ಲಂಡನ್ : ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾದ ಚೇತೇಶ್ವರ ಪುಜಾರ, ಅಜಿಂಕ್ಯ ರಹಾನೆ ಪರ ಕನ್ನಡಿಗ ಕೆ ಎಲ್ ರಾಹುಲ್ ಬ್ಯಾಟ್ ಬೀಸಿದ್ದಾರೆ.
ಕ್ರಿಕೆಟ್ ಕಾಶಿ ಲಾಡ್ರ್ಸ್ ನಲ್ಲಿ ನಡೆಯುತ್ತಿರುವ ಇಂಡೋ ಆಂಗ್ಲೋ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.
ಪರಿಣಾಮ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 364ರನ್ ಗಳಿಗೆ ಆಲೌಟ್ ಆಗಿದೆ.
ಇತ್ತ ತಂಡದ ಪ್ರಮುಖ ಬ್ಯಾಟ್ಸಮನ್ ಗಳಾದ ರಹಾನೆ ಹಾಗೂ ಪೂಜಾರಾ ವೈಫಲ್ಯ ಅನುಭವಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೆ ಎಲ್ ರಾಹುಲ್, ರನ್ ಗಳಿಕೆ ಮಾಡಲು ಹೆಣಗಾಡುತ್ತಿರುವ ಪೂಜಾರಾ ಹಾಗೂ ರಹಾನೆ ಆದಷ್ಟು ಬೇಗ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ.
ಅವರಿಬ್ಬರು ವಿಶ್ವ ದರ್ಜೆ ಪ್ಲೇಯರ್ಸ್ ಗಳು. ಭಾರತ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಸಂದರ್ಭಗಳಲ್ಲಿ ಪೂಜಾರಾ ಹಾಗೂ ರಹಾನೆ ತಂಡಕ್ಕೆ ಸಾಥ್ ನೀಡಿದ್ದು, ಆದಷ್ಟು ಬೇಗ ಕಳಪೆ ಫಾರ್ಮ್ ನಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ತಮ್ಮ ಶತಕದ ಬಗ್ಗೆ ಮಾತನಾಡಿ, ಇಂಗ್ಲೆಂಡ್ ನಲ್ಲಿ ಬ್ಯಾಟ್ ಮಾಡುವುದು ತುಂಬಾ ಕಠಿಣ. ಪ್ರತಿವೊಂದು ಟೆಸ್ಟ್ ಶತಕ ನನಗೆ ವಿಶೇಷ. ಆದರೆ ಲಾಡ್ರ್ಸ್ ಮೈದಾನದಲ್ಲಿ ಗಳಿಕೆ ಮಾಡಿರುವ ಶತಕ ಮತ್ತಷ್ಟು ಹತ್ತಿರವಾಗಿದೆ ಎಂದಿದ್ದಾರೆ.









