ಭಾರತದ ಜೊತೆಗೆ 11 ದೇಶಗಳ ಮೇಲಿನ ವಿಮಾನ ಪ್ರಯಾಣ ನಿರ್ಬಂಧ ಸಡಿಲಿಸಿದ ಪಾಕಿಸ್ತಾನ..!
ಕೊರೊನಾ 3ನೇ ಹಾವಳಿ ಭೀತಿಯ ನಡುವೆ ಪ್ರತಿನಿತ್ಯ ಹಲವಾರು ದೇಶಗಳಲ್ಲಿ ಕೊರೊನಾ ಸೋಂಕಿತರ ಸೈನಂದಿನ ಕೇಸ್ ಗಳ ಪ್ರಮಾಣದಲ್ಲಿ ಏರಿಳಿತದ ನಡುವೆಯೇ ಪಾಕಿಸ್ತಾನವು ಭಾರತವನ್ನೂ ಸೇರಿದಂತೆ ಒಟ್ಟು 11 ದೇಶಗಳ ಮೇಲಿನ ವಿಮಾನ ಪ್ರಯಾಣ ನಿರ್ಬಂಧ ಸಡಿಲಿಸಿದೆ.
ನಾಗರಿಕ ವಿಮಾನಯಾನ ಅಂತರರಾಷ್ಟ್ರೀಯ ಪ್ರಯಾಣ ಪಟ್ಟಿಯನ್ನು ಪರಿಶೀಲಿಸಿದ್ದು, ಭಾರತ, ಅರ್ಜೆಂಟೀನಾ, ಭೂತಾನ್, ಮಾಲ್ಡೀವ್ಸ್ ಸೇರಿ ಒಟ್ಟು 11 ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಸಿದೆ ಎಂದು ವರದಿಯಾಗಿದೆ.
ಇನ್ನೂ ಪಾಕಿಸ್ತಾನದ ನಾಗರಿಕರು ಈ ದೇಶಗಳಿಂದ ತಮ್ಮ ದೇಶಕ್ಕೆ ವಾಪಸ್ ಆಗಲು ಅನುಮತಿ ನೀಡಿರುವ ಪಾಕಿಸ್ತಾನವು ಕೋವಿಡ್ ಪರೀಕ್ಷೆಯ ನಗೆಟಿವ್ ರಿಪೋರ್ಟ್ ಕಡ್ಡಾಯವಾಗಿಸಿದೆ. ಜೊತೆಗೆ ಲಸಿಕೆ ಪಡೆಯದವವರ ಪ್ರಯಾಣವನ್ನೂ ನಿರ್ಬಂಧಿಸಿದೆ.








