ಇನ್ಮುಂದೆ ಮೊಬೈಲ್ ನೊಂದಿಗೆ ಸಿಎಂ ನಿವಾಸಕ್ಕೆ ಹೋಗಂಗಿಲ್ಲ
ಬೆಂಗಳೂರು : ಇನ್ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ನೊಂದಿಗೆ ಸಿಎಂ ನಿವಾಸ ಪ್ರವೇಶ ಮಾಡಂಗಿಲ್ಲ.
ಈ ಬಗ್ಗೆ ಸಿಎಂ ಖಾಸಗಿ ನಿವಾಸ ಆರ್.ಟಿ.ನಗರ ಮನೆಯ ಹೊರಭಾಗದಲ್ಲಿ ಅಧಿಕೃತವಾಗಿ ಬೋರ್ಡ್ ಹಾಕಲಾಗಿದೆ.
ಮುಖ್ಯಮಂತ್ರಿಗಳನ್ನು ಭೇಟಿಯಾಗಲೆಂದು ಬರುವವರು ಮುಖ್ಯಮಂತ್ರಿಗಳ ಜೊತೆ ಫೋಟೋ, ವಿಡಿಯೋ ತೆಗೆಸಿಕೊಳ್ಳಲು ಮುಂದಾಗುತ್ತಾರೆ.
ಇದರಿಂದ ಸಿಎಂ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಈ ಹಿನ್ನಲೆಯಲ್ಲಿ ಇದೀಗ ಮುಖ್ಯಮಂತ್ರಿ ನಿವಾಸಕ್ಕೆ ಯಾರು ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.









