ಸುಪ್ರೀಂಕೋರ್ಟ್ ಹೊರಗೆ ಆತ್ಮಹತ್ಯೆಗೆ ಯತ್ನ
ನವದೆಹಲಿ : ಬೆಂಕಿ ಹಚ್ಚಿಕೊಂಡು ಇಬ್ಬರು ಸುಪ್ರೀಂ ಕೋರ್ಟ್ ಹೊರಗೆ ಆತ್ಮಹತ್ಯಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ಹೊರಗೆ ಮಹಿಳೆ ಮತ್ತು ಪುರುಷರೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಇದನ್ನು ಗಮಿಸಿದ ಅಲ್ಲಿನ ಪೊಲೀಸರು ಕೂಡಲೇ ಕಾರ್ಯಪ್ರೌರುತ್ತರಾಗಿ ಅವರಿಬ್ಬರಿಗೆ ಕಂಬಳಿ ಸುತ್ತಿ, ಬೆಂಕಿಯನ್ನು ನಂದಿಸಿದ್ದಾರೆ.
ಅಲ್ಲದೆ ಗಾಯಾಳುಗಳನ್ನು ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸದ್ಯ ಅವರ ಪರಿಸ್ಥಿತಿ ಸುಧಾರಿಸಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿಲ್ಲ.
ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ನವದೆಹಲಿಯ ಪೊಲೀಸ್ ಉಪ ಆಯುಕ್ತ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ.









