NDA ಪರೀಕ್ಷೆಗೆ ಮಹಿಳೆಯರಿಗೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್..!
ಇಂದು (ಆಗಸ್ಟ್ 18ರಂದು ) ಸುಪ್ರೀಂ ಕೋರ್ಟ್ ಮಹಿಳೆಯರ ಪರ ಮಹತ್ವದ ತೀರ್ಪು ನೀಡಿದೆ.. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಗೆ ಮಹಿಳೆಯರಿಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 5 ರಂದು ನಿಗದಿಯಾಗಿರುವ ಪರೀಕ್ಷೆಯಲ್ಲಿ ಮಹಿಳೆಯರು ಪರೀಕ್ಷೆ ಬರೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ನೀತಿಯು ಲಿಂಗ ತಾರತಮ್ಯ ಆಧರಿಸಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಇದು ಅಂತಿಮ ತೀರ್ಪು ಎಂದು ಕೂಡ ಉಲ್ಲೇಖಿಸಿದೆ. ಕುಶ್ ಕಲ್ರಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠವು ಇಂದು ಮಧ್ಯಂತರ ಆದೇಶ ನೀಡಿದೆ.
ಕರ್ನಾಟಕ – ಮಂಗಳವಾರ 1,298 ಹೊಸ ಕೊರೋನವೈರಸ್ ಪ್ರಕರಣಗಳು ದಾಖಲು
ಕುಶ್ ಕಲ್ರಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರುವ ಅವಕಾಶವನ್ನು ನಿರಾಕರಣೆ ಮಾಡಿರುವುದು ಭಾರತೀಯ ಸಂವಿಧಾನದ 14, 15, 16 ಮತ್ತು 19 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.. ಅರ್ಜಿದಾರರ ಪ್ರಕಾರ, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅವರ ಲಿಂಗದ ಆಧಾರದ ಮೇಲೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರುವ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಮಹಿಳಾ ಅಧಿಕಾರಿಗಳಿಗೆ ವೃತ್ತಿ ಪ್ರಗತಿಯ ಅವಕಾಶಗಳಲ್ಲಿ ಅಡಚಣೆಯಾಗುತ್ತದೆ ಎಂದು ಕೋರಲಾಗಿತ್ತು ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಭದ್ರತೆಗೆ ಮಹತ್ವದ ಸಭೆ
ಆಯೋಗವು ನಡೆಸುವ ಲಿಖಿತ ಪರೀಕ್ಷೆಯಲ್ಲಿ ಸಾಧನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಸೇವಾ ಆಯ್ಕೆ ಮಂಡಳಿಯು ಬುದ್ಧಿವಂತಿಕೆ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸುತ್ತದೆ. ಗಣಿತ ಮತ್ತು ಸಾಮಾನ್ಯ ಸಾಮರ್ಥ್ಯ – ಈ ಎರೆಡು ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯುತ್ತದೆ. ಎರಡೂ ಪತ್ರಿಕೆಗಳು ಎರಡೂವರೆ ಗಂಟೆ ಇರುತ್ತದೆ. ಗಣಿತ ಪತ್ರಿಕೆ 300 ಅಂಕಗಳು ಮತ್ತು ಸಾಮಾನ್ಯ ಸಾಮರ್ಥ್ಯ ಪರೀಕ್ಷೆ 600 ಅಂಕಗಳಿಗಿರುತ್ತದೆ.