ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ
ಪಶ್ಚಿಮ ಬಂಗಾಳದಲ್ಲಿ ಭಾರೀ ಹೈಡ್ರಾಮ , ಹಿಂಸಾಚಾರಗಳ ನಂತರ ಕಡೆಗೂ ನಡೆದ ವಿದಾನಸಭೆಯಲ್ಲಿ ಮತ್ತೆ TMC ಗೆಲುವಿನ ನಗೆ ಬೀರಿತ್ತು.. ಮತ್ತೊಮ್ಮೆ ದೀದಿ ಬಂಗಾಳದ ಸಿಎಂ ಆಗಿ ಮುಂದುವರೆದಿದ್ದಾರೆ.. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರವೂ ಹಿಂಸಾಚಾರ ಮುಮದುವರೆದಿತ್ತು. ಈಗಲೂ ಹಿಂಸಾಚಾರ ಮುಂದುವರೆದಿದೆ.. ಹೀಗಾಗಿ ಚುನಾವಣೆ ನಂತರ ನಡೆದ ಹಿಂಸಾಚಾರ ಕುರಿತು ಸಿಬಿಐ ತನಿಖೆ ನಡೆಸಲು ಕೊಲ್ತತ್ತಾ ಹೈ ಕೋರ್ಟ್ ಆದೇಶ ನೀಡಿದೆ. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಸಿಬಿಐ ನಡೆಸಲಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯನ್ನು ಎಸ್‍ಐಟಿ ನಡೆಸಬೇಕು. ಇದರ ಜೊತೆಗೆ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
ತಾಲಿಬಾನಿಗಳ ಕಪಿಮುಷ್ಠಿಯಲ್ಲಿರುವ ಅಫ್ಗಾನ್ ನಲ್ಲಿ ಭೂಕಂಪನ
ಜೊತೆಗೆ 6 ವಾರಗಳ ಒಳಗಡೆ ವರದಿ ನೀಡುವಂತೆ ಸಿಬಿಐ ಮತ್ತು ಎಸ್ ಐ ಟಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೇ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆ ನಡೆಸುವಲ್ಲಿ ವಿಫಲವಾಗಿದ್ದು, ಚುನಾವಣಾ ಆಯೋಗದ ಕಾರ್ಯ ವೈಖರಿಯ ವಿರುದ್ಧ ಅಸಮಾಧಾನ ಹೊರ ಹಾಕಿ ಚುನಾವಣಾ ಆಯೋಗವು ಉತ್ತಮವಾಗಿ ಕೆಲಸ ಮಾಡಬಹುದಾಗಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಇನ್ನೂ ಕೊಲ್ಕತ್ತಾದ ಪೊಲೀಸ್ ಕಮಿಷನರ್ ಸೋಮೆನ್ ಮಿತ್ರಾ ಅವರು ಕೂಡ ತನಿಖೆಯ ಭಾಗವಾಗಲಿದ್ದಾರೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 36,401 ಕೇಸ್ ಪತ್ತೆ
ರಾಜಕೀಯ ಹಿಂಸಾಚಾರದಲ್ಲಿ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದರು. ಆದ್ರೆ 17ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಾದ ಬಳಿಕ ಹಿಂಸಾಚಾರದ ಕುರಿತು ಸಮೀಕ್ಷೆ ನಡೆಸಿ ಬಿಜೆಪಿ ವರದಿ ಸಿದ್ಧಪಡಿಸಿತ್ತು. ಈ ವರದಿಯಲ್ಲಿ ಹಿಂಸೆ, ಕೊಲೆ, ದರೋಡೆ ಮತ್ತು ಬೆಂಕಿ ಹಾಕಿದ ಒಟ್ಟು 273 ಘಟನೆಗಳು ನಡೆದಿವೆ ಎಂದ ಆರೋಪಿಸಿತ್ತು. ಏಪ್ರಿಲ್-ಮೇನಲ್ಲಿ ಚುನಾವಣೆ ನಡೆದ ಬಳಿಕ ಅಂದ್ರೆ ಫಲಿತಾಂಶದ ದಿನ ಕೋಲ್ಕತ್ತಾದ ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಾಕಲಾಗಿತ್ತು. ಈ ಘಟನೆ ನಡೆದ ಮರುದಿನವೇ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆ ನಡೆದಿತ್ತು.. ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು TMC ವಿರುದ್ಧ BJP ಆರೋಪಿಸಿತ್ತು.