ಆರ್ ಸಿಬಿಗೆ ಆಘಾತ : ಟೂರ್ನಿಯಿಂದ ಆಸೀಸ್ ಆಟಗಾರ ಔಟ್
ಬೆಂಗಳೂರು : ಕೊರೊನಾದಿಂದ ಸ್ಥಗಿತಗೊಂಡಿದ್ದ ಐಪಿಎಲ್ ನ ಇನ್ನುಳಿದ 31 ಪಂದ್ಯಗಳು ಸೆಪ್ಟೆಂಬರ್ ನಿಂದ ಯುಎಇನಲ್ಲಿ ಆರಂಭವಾಗಿದೆ. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ.
ಆರ್ ಸಿಬಿ ತಂಡದ ಆಲ್ ರೌಂಡರ್ ಕೇನ್ ರಿಚಡ್ರ್ಸ್‍ನ್ ಈ ಬಾರಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಕೇನ್ ರಿಚಡ್ರ್ಸನ್ ಭಾಗವಹಿಸುವುದಿಲ್ಲ ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಅಂದಹಾಗೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 4 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ವೇಗಿ ಕೇನ್ ರಿಚಡ್ರ್ಸನ್ ಟೂರ್ನಿಯಲ್ಲಿ ಇದುವರೆಗೂ ಆರ್‍ಸಿಬಿ ಪರ ಕೇವಲ ಒಂದೇ ಒಂದು ಪಂದ್ಯವನ್ನಾಡಿ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ಟಿ 20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದ್ದು, ಇದರಲ್ಲಿ ಕೇನ್ ರಿಚಡ್ರ್ಸಸ್ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಐಪಿಎಲ್ ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.