ಅಫ್ಘಾನಿಸ್ತಾನ ಬಿಕ್ಕಟ್ಟು: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದೇನು..?
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಅಫ್ಗಾನಿಸ್ತಾನದ ಅಧಿಕಾರವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಗಿಂತ ಬೇರೆ ದೇಶಗಳಲ್ಲಿ ಸಕ್ರಿಯವಾಗಿರುವ ಅಲ್-ಕೈದಾ ಉಗ್ರ ಸಂಘಟನೆಯಿಂದ ಅಮೆರಿಕಾಕ್ಕೆ ಹೆಚ್ಚು ಅಪಾಯವಿದೆ. ಹೀಗಾಗಿ ಅಫ್ಗಾನಿಸ್ತಾನದಲ್ಲಿ ಸೇನೆ ನಿಯೋಜಿಸುವ ಕಡೆ ಹೆಚ್ಚು ಗಮನ ನೀಡಬೇಕಿಲ್ಲ ಎಂದು ಬೈಡನ್ ಹೇಳಿದ್ದಾರೆ.
ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಂಡ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಸೇನೆಯ ಮೂಲಕ ರಕ್ಷಿಸಲು ಸಾಧ್ಯವಾಗದು. ಅದು ಅಂತರರಾಷ್ಟ್ರೀಯ ಮಟ್ಟದ ಒತ್ತಡ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಾಧಿಸಬೇಕಿರುವ ಕಾರ್ಯ ಎಂದು ಪ್ರತಿಪಾದಿಸಿದ್ದಾರೆ. ಇನ್ನೂ ಅಫ್ಗಾನಿಸ್ತಾನದಲ್ಲಿರುವ ಕೊನೆಯ ಅಮೆರಿಕ ಪ್ರಜೆಯನ್ನು ತೆರವು ಮಾಡುವ ತನಕವೂ ನಮ್ಮ ಸೇನೆ ಅಲ್ಲಿ ಇರಲಿದೆ.
ಅಫ್ಗಾನಿಸ್ತಾನದಲ್ಲಿ ಸೇನೆ ನಿಯೋಜಿಸುವುದಕ್ಕಿಂತ, ತಾಲಿಬಾನಿಗಳಿಗಿಂತ ಹೆಚ್ಚು ಅಪಾಯ ಕಾರಿಯಾಗಲಿರುವ ದೇಶಗಳಲ್ಲಿ ಸೇನೆ ನಿಯೋಜಿಸಬೇಕಾಗುತ್ತದೆ. ಸಿರಿಯಾ ದಲ್ಲಿ ಅಲ್-ಕೈದಾ ಹೆಚ್ಚು ಪ್ರಬಲವಾ ಗಿದೆ. ಅದು ತಾಲಿಬಾನಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ತಮ್ಮ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.. ಆದ್ರೆ ಅಸಲಿಗೆ ಬೈಡೆನ್ ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ.. ಆದ್ರೆ ಅವರ ಈ ನಿರ್ಧಾರದಿಂದಾಗಿ ಜಗತ್ತಿನಲ್ಲಿ ಅವರ ಪ್ರಭಾವ ಕಡಿಮೆಯಾಗಿರೋದಾಗಿ ಅಭಿಪ್ರಾಯಗಳು ವ್ಯಕ್ತವಾಗತೊಡಗಿದೆ.








