ತೈವಾನ್ ಪಡೆಯಲು ತಾಲಿಬಾನಿಗಳನ್ನು ಅನುಸರಿಸುವ ಕನಸು ಕಾಣ್ತಿದೆ ಚೀನಾ – ತೈವಾನ್ ವಿದೇಶಾಂಗ ಸಚಿವ
ತೈಪೈ : ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಲ್ಲದೇ ತಾಲೀಬಾನಿಗಳಿಗೆ ಚೀನಾ ಹಾಗೂ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲಿಸುತ್ತಿವೆ ಅನ್ನೋ ವಿಚಾರಗಳು ಹೊಸದೇನಲ್ಲ.. ಆದ್ರೆ ಇದೇ ಚೈನಾ ತಾಲಿಬಾನಿಗಳನ್ನ ಅನುಕರಿಸಲು ಹೊರಟಿದೆ ಎಂದು ತೈವಾನ್ ನ ವಿದೇಶಾಂಗ ಸಚಿವರು ಆರೋಪ ಮಾಡಿದ್ದಾರೆ..
ಜೊತೆಗೆ ಚೀನಾದ ಬೀಜಿಂಗ್ ತನ್ನ ಭೂಮಿಯ ಭಾಗ ಎಂದು ವಾದಿಸುತ್ತಿರುವ ದ್ವೀಪವು ಕಮ್ಯುನಿಸಂ ಅಥವಾ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದು ಹೇಳಿದರು. ಯುಎಸ್ ಬೆಂಬಲಿತ ಅಫ್ಘಾನ್ ಸರ್ಕಾರದ ಕ್ಷಿಪ್ರ ಪತನದ ನಂತರ ತಾಲೀಬಾನ್ ಸರ್ಕಾರ ರಚನೆಯಾಗಿದ್ದು, ಜಗತ್ತಿನಾದ್ಯಂತ ಇದೇ ವಿಚಾರ ಚರ್ಚೆಯಾಗ್ತಿದೆ. ಈ ನಡುವೆ ತೈವಾನ್ ನಲ್ಲೂ ಈ ಕುರಿತಾಗಿ ಚರ್ಚೆಯಾಗ್ತಿದ್ದು, ಚೀನಾ ತಾಲಿಬಾನ್ ನ್ನು ಅನುಕರಿಸುವ ಕನಸು ಕಾಣುತ್ತಿದೆ ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ಆರೋಪಿಸಿದ್ದಾರೆ.
ಅನೈತಿಕ ಸಂಬಂಧ ಆರೋಪ – ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ
ಅಮೆರಿಕದ ಬೆಂಬಲದಿಂದ ತೈವಾನ್ ಚೀನಾದ ವಿರೋಧವನ್ನು ಕಟ್ಟಿಕೊಂಡಿದ್ದು, ಅಮೆರಿಕದಿಂದ ಅಫ್ಗಾನಿಸ್ತಾನಕ್ಕೆ ಆದ ಗತಿಯೇ ನಮಗೂ ಆಗಬಹುದೇ, ಎಂಬ ಚರ್ಚೆ ತೈವಾನ್ ಲ್ಲಿ ಶುರುವಾಗಿದೆ. ತೈವಾನ್ ಚೀನಾದ ಸಾರ್ವಭೌಮ ಪ್ರದೇಶವೆಂದು ಹೇಳಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ನಾವು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಒಳಪಟ್ಟಿಲ್ಲ. ಚೀನಾ ತಾಲಿಬಾನ್ ಅನುಕರಿಸುವ ಕನಸು ಕಾಣುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ತೈವಾನ್ ಮೇಲೆ ಚೀನಾದ ಒತ್ತಡವನ್ನು ನಿಲ್ಲಿಸುವಂತೆ ಅಮೆರಿಕ ವಿದೇಶಾಂಗ ಸಚಿವಾಲಯದ ಕರೆಯನ್ನು ಪುನರುಚ್ಚಿಸಿರುವ ಜೋಸೆಫ್ ತೈವಾನ್‌ನ ಜನರ ಹಿತಾಸಕ್ತಿಗಳನ್ನು ಎತ್ತಿ ಹಿಡಿದಿರುವುದಕ್ಕೆ ಅಮೆರಿಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.








