ವಿವಾಹಿತ ಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಆರೋಪದ ಮೇಲೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಕುತ್ತಿಗೆಗೆ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ನಾಚಿಕೆಗೇಡಿನ ಘಟನೆಯೊಂದು ಜಾರ್ಖಂಡ್ ನ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಣೀಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾಹಿತ ಮಹಿಳೆಯು, ವಿವಾಹಿತ ವ್ಯಕ್ತಿಯೊಬ್ಬನ ಜೊತೆಗೆ ಪರಾರಿಯಾಗಲು ಯತ್ನಿಸಿದ್ದರು ಎಂಬ ಆರೋಪವಿದೆ.. ಇದಕ್ಕಾಗಿ ಆಕೆ ಸಕ್ರಮ ಸಂಬಂಧ ಬೆಳೆಸಿದ್ದಾಳೆ ಎಂದು ಹೇಳಲಾದ ವ್ಯಕ್ತಿಯ ಪತ್ನಿಯ ಕುಟುಂಬದ ಸದಸ್ಯರು ಮಹಿಳೆಯನ್ನು ಥಳಿಸಿ ಆಕೆಯನ್ನು ವಿವಸ್ತ್ರಳನ್ನಾಗಿಸಿ, ಕುತ್ತಿಗೆಗೆ ಶೂಗಳ ಹಾರ ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಪರಾರಿಯಾಗುತ್ತಿದ್ದ ವ್ಯಕ್ತಿ ಮತ್ತು ಆತನ ಪತ್ನಿ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ, ಥಳಿತಕ್ಕೊಳಗಾದ ಮಹಿಳೆ, ತನ್ನಿಂದ 25ಸಾವಿರ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಅಂದ್ಹಾಗೆ ಪೊಲೀಸರು ತಿಳಿಸಿರುವಂತೆ ಸಂತ್ರಸ್ತ ಮಹಿಳೆ ಹಾಗೂ ಆ ವ್ಯಕ್ತಿ ಪರಾರಿಯಾಗಿದ್ದು, ಬಳಿಕ ಆ ವ್ಯಕ್ತಿಯ ಪತ್ನಿಗೆ ಸಂಬಂಧಿಕರ ಕೈಗೆ ತಗಲಾಕಿಕೊಂಡಿದ್ದ ನಂತರ ಹಲ್ಲೆ ನಡೆಸಲಾಗಿದ್ದು, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವುದಾಗಿ ಹೇಳಲಾಗ್ತಿದೆ.
ತಲೆಸುತ್ತಿ ರೈಲ್ವೇ ಹಳಿ ಮೇಲೆ ಬಿದ್ದ ವೃದ್ಧ – ಪ್ರಾಣದ ಹಂಗು ತೊರೆದು ಕಾಪಾಡಿದ ಅಧಿಕಾರಿಗಳು – ವಿಡಿಯೋ ಫುಲ್ ವೈರಲ್
ಕಾಬುಲ್ : ತಾಲಿಬಾನಿಗಳಿಂದ 150 ಭಾರತೀಯರ ಕಿಡ್ನಾಪ್..!