ಐಪಿಎಲ್ 2021 | ರಾಯಲ್ ಚಾಲೆಂಜರ್ಸ್ಗೆ `ಸಿಂಹ’ ಬಲ
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಂಹ ಬಲ ಬಂದಿದೆ. ಈ ಬಾರಿಯ ಇನ್ನುಳಿದ ಐಪಿಎಲ್ ಪಂದ್ಯಗಳು ಮುಂದಿನ ತಿಂಗಳಿನಿಂದ ದುಬೈನಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಭರದಿಂದ ಸಾಗುತ್ತಿದೆ. ಇತ್ತ ತಂಡಗಳು ಕೂಡ ಈಗಾಗಲೇ ದುಬೈನತ್ತ ಮುಖಮಾಡುತ್ತಿದ್ದು, ಆರ್ ಸಿಬಿ ತಂಡದಲ್ಲಿ ಒಂದಿಷ್ಟು ಬದಲಾವಣೆಗಳು ಆಗಿವೆ. ಸ್ಟಾರ್ ಆಲ್ ರೌಂಡರ್ ಆಗಿದ್ದ ರಿಚರ್ಡ್ಸನ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಜೊತೆಗೆ ಆಡಂ ಜಂಪಾ ಕೂಡ ಐಪಿಎಲ್ ಗೆ ಅಲಭ್ಯರಾಗಲಿದ್ದಾರೆ ಎಂದು ಈಗಾಗಲೇ ತಿಳಿದುಬಂದಿದೆ. ಇದು ಆರ್ ಸಿಬಿಗೆ ತುಸು ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಇದೀಗ ಆರ್ ಸಿಬಿ ಸ್ಮಾರ್ಟ್ ಮ್ಯೂ ಮಾಡಿದ್ದು, ಜಂಪಾ ಸ್ಥಾನಕ್ಕೆ ಶ್ರೀಲಂಕಾದ ಪ್ರತಿಭಾನ್ವಿತ ಆಟಗಾರ ಸ್ಟಾರ್ ಆಲ್ ರೌಂಡರ್ ವನಿಂದು ಹಸರಂಗ ಅವರನ್ನು ಕರೆತಂದಿದೆ.
https://twitter.com/i/status/1429019050852556800
ಈ ಬಗ್ಗೆ ಸ್ವತಃ ಆರ್ ಸಿಬಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಕೇವಲ ಹಸರಂಗಾ ಮಾತ್ರವಲ್ಲದೇ ಆರ್ ಸಿಬಿ, ಡೇವಿಡ್ ಮತ್ತು ದುಶ್ಮಂತ ಚಮೀರಾ ಅವರನ್ನು ಸಹ ಆಯ್ಕೆ ಮಾಡಿದೆ.
ಅಂದಹಾಗೆ ಧವನ್ ನಾಯಕತ್ವದಲ್ಲಿ ಭಾರತ ತಂಡ ಲಂಕಾ ಪ್ರವಾಸ ಕೈಗೊಂಡಿದ್ದಾಗ ಶ್ರೀಲಂಕಾ ಆಲ್ ರೌಂಡರ್ ವನಿಂದು ಹಸರಂಗ ಅದ್ಭುತ ಪ್ರದರ್ಶನ ತೋರಿಸಿದ್ದರು. ಬಲಗೈ ಲೆಗ್ ಬ್ರೇಕ್ ಸ್ಪಿನ್ನರ್ ಆಗಿರು ಹಸರಂಗ, ಭಾರತದ ವಿರುದ್ಧದ ಮೂರು ಪಂದ್ಯಗಳಲ್ಲಿ 5.54 ಎಕಾನಮಿ ದರದಲ್ಲಿ 7 ವಿಕೆಟ್’ಗಳನ್ನು ಪಡೆದರು. ಹಸರಂಗ ಪ್ರಸ್ತುತ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಈ ಸರಣಿಯಲ್ಲಿ ಅವರ ಪ್ರದರ್ಶನವನ್ನು ಕಣ್ತುಂಬಿಕೊಂಡಿದ್ದ ಆರ್ ಸಿಬಿ ಅವರನ್ನು ಜಂಪಾ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಲು ಮುಂದಾಗಿತ್ತು. ಆ ಯತ್ನ ಇದೀಗ ಸಫಲವಾಗಿದೆ.








