ನೆರೆ ಮನೆಯವರ ಮೇಲೆ ಸೇಡು – ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದವಳಿಗೆ ಜೈಲು..!
ಕಲಬುರಗಿ : ನೆರೆಹೊರೆಯವರ ಜೊತೆಗಿನ ಜಗಳ ಅವರ ಮೇಲಿನ ಕೋಪ ಸೇಡನ್ನ ಮಕ್ಕಳ ಮೇಲೆ ತೀರಿಸಿಕೊಂಡಿದ್ದ ಪಾಪಿಯೊಬ್ಬಳು ಮಕ್ಕಳ ಮೇಲೆ ಬಿಸಿ ಬಿಸಿ ಕುದಿಯುವ ಎಣ್ಣೆ ಸುರಿದಿದ್ದ ಪ್ರಕರಣ ಸಂಬಂಧ 5 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದಾಳೆ.
5 ವರ್ಷ ಜೈಲು ಶಿಕ್ಷೆ ವಿಧಿಸುವ ಜೊತೆಗೆ 2 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯವು ಆದೇಶಿಸಿದೆ. ಕಲಬುರಗಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಆನಂದನಗರ ಬಡಾವಣೆಯ ನಿವಾಸಿಯಾದ (57) ಶ್ರೀದೇವಿ ಕೋರವಾರ ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದಾಳೆ.
2019 ರಲ್ಲಿ ಮನೆ ಅಂಗಳದಲ್ಲಿ ಆಟವಾಡಿಕೊಂಡಿದ್ದ ಅಹನಾ ಮತ್ತು ಪಾರ್ವತಿ ಎಂಬ ಇಬ್ಬರು ಮಕ್ಕಳನ್ನು ಚಾಕೋಲೆಟ್ ಕೊಡುವುದಾಗಿ ನಂಬಿಸಿ, ಅವರನ್ನ ಮನೆ ಒಳಗೆ ಕರೆದುಕೊಂಡು ಹೋಗಿ ಬಿಸಿ ಅಡುಗೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಳು ಈ ಪಾಪಿ. ಘಟನೆಯಲ್ಲಿ ಓರ್ವ ಬಾಲಕಿಯ ಹಣೆ, ಎದೆ ಹಾಗೂ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಇನ್ನೋರ್ವ ಬಾಲಕಿಯ ಕೈಬೆರಳುಗಳು ಸುಟ್ಟು ಹೋಗಿದ್ದವು. ಈ ಸಂಬಂಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








