ಪ್ರಿಯಾಂಕಾ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ರಾಹುಲ್ rahul-gandhi saaksha tv
ನವದೆಹಲಿ : ಇಂದು ಭಾರತದಾದ್ಯಂತ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೋದರ-ಸಹೋದರಿಯರ ಪ್ರೀತಿಯ ಸಂಕೇತವಾಗಿರುವ ಈ ವಿಶೇಷ ದಿನದಂದು ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟಿ, ಸಿಹಿ ತಿನಿಸಿ ಶುಭ ಹಾರೈಸುತ್ತಾರೆ. ಅದರಂತೆ ಸೋದರ ಕೂಡ ತನ್ನ ಸೋದರಿಗೆ ಶುಭ ಕೋರುತ್ತಾರೆ.
ಅದರಂತೆ ರಕ್ಷಾ ಬಂಧನದ ಈ ಶುಭ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ರಾಹುಲ್, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆಗಿರುವ ಬಾಲ್ಯ, ಯೌವನ ಹಾಗೂ ಈಗೀನ ಫೆÇೀಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.
ಅಲ್ಲದೆ ಸಹೋದರಿಯಾಗಿ ಸ್ನೇಹಿತೆಯಾಗಿ ಜೊತೆಗಿರುವ ನನ್ನ ಸಹೋದರಿಗೆ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ನಾವಿಬ್ಬರೂ ಪರಸ್ಪರ ಸ್ನೇಹಿತರು ಹಾಗೂ ರಕ್ಷಕರು. ನಿಮ್ಮೆಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ ರಾಹುಲ್ ಗಾಂಧಿ.









