ಹಾಸನ: 73 ವರ್ಷದ ವೃದ್ಧನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಸದ್ಯ ಬಾಲಕಿ ಗರ್ಭಿಣಿಯಾಗಿರುವ ಘಟನೆ ನಡೆದಿದೆ.
ವೃದ್ಧನ ಪೈಶಾಚಿಕ ಕೃತ್ಯ ಹಾಸನ (Hassan) (Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ 73 ವರ್ಷದ ಮೀಸೆ ಮಂಜಯ್ಯ ಎಂಬ ಪಾಪಿಯೇ 13 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಹೀಗಾಗಿ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಇದರಿಂದ ಮನನೊಂದು ಸಂತ್ರಸ್ಥೆ ಬಾಲಕಿ ತಾಯಿ ವಿಷ ಸೇವಿಸಿದ್ದು, ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ನಿರಂತರ ಅತ್ಯಾಚಾರದಿಂದಾಗಿ ಬಾಲಕಿ ತನಗೆ ಅರಿವಿಲ್ಲದೇ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ನಂತರ ತಾಯಿಗೆ ಅನುಮಾನ ಬಂದಾಗ ಬಾಲಕಿ ವಿಚಾರವನ್ನು ಬಾಯಿ ಬಿಟ್ಟಿದ್ದಾಳೆ. ಆರೋಪಿ ಮೀಸೆ ಮಂಜಯ್ಯನನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆ ಪಾಪಿ ವಿಧವಾವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹಲವು ಮಹಿಳೆಯರನ್ನು ಎಮೋಷನಲ್ ಬ್ಲಾಕ್ಮೇಲ್ ಮಾಡುತ್ತಿದ್ದ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.