ಕಾರಣ ಹೇಳಲು ಭಯವಾಗ್ತಿದೆ –ಇದು ಮನಕಲುಕುವ ಡೆತ್ ನೋಟ್
“ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೆ ಆಗಿರಬೇಕು . ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ನಾನು ಈ ಭೂಮಿಯಲ್ಲಿ ದೀರ್ಘಕಾಲ ಬದುಕಬೇಕು ಮತ್ತು ಇತರರಿಗೆ ಸಹಾಯ ಮಾಡಬೇಕು ಎಂದು ಬಯಸಿದ್ದೆ, ಆದರೆ ಈಗ ನಾನು ಇಷ್ಟು ಬೇಗ ಇಹಲೋಕ ತ್ಯಜಿಸುವಂತಾಗಿದೆ” ಎಂದು ಭಾವನಾತ್ಮಕ ಪತ್ರವನ್ನ ಬರೆದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ.
ಲೈಂಗಿಕ ಶೋಷಣೆಯಿಂದ ನೊಂದ 17 ವರ್ಷದ ಬಾಲಕಿಯೊಬ್ಬಳು ಈ ರೀತಿ ಮನಕಲುಕುವಂತಹ ಡೆತ್ ನೋಟ್ ಬರೆದಿಟ್ಟು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. 12 ನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.








