ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಉದ್ಯಮ ಪಾರ್ಕ್ – ದೇಶದಲ್ಲೆ ಮೊದಲು

1 min read

ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಉದ್ಯಮ ಪಾರ್ಕ್ –ದೇಶದಲ್ಲೆ ಮೊದಲು

ಉದ್ಯಮದತ್ತ  ಮಹಿಳೆಯರನ್ನ ಇನ್ನಷ್ಟು ಆಕರ್ಷಿಸಲು ಮೈಸೂರು ದಾರವಾಡ ಹಾರೋಹಳ್ಳಿ ಕಲ್ಬುರ್ಗಿಯಲ್ಲಿ ಪ್ರತ್ಯೇಕವಾಗಿ ಮಹಿಳಾ ಉದ್ಯಮ ಪಾರ್ಕ್ಗಳನ್ನ ಶೀಘ್ರದಲ್ಲೆ ಪ್ರಾರಂಭಿಸುತ್ತವೆ ಎಂದು ಸಚಿವ  ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಮಹಿಳಾ ಉದ್ಯಮಿಗಳಿಗಾಗಿಯೇ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ  ದೇಶದ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ.

ಇನ್ಫೋಸಿಸ್‌ನ ಸುಧಾ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಸೇರಿದಂತೆ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು  ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಅವರಂತೆಯೇ  ಕರ್ನಾಟಕದ ಇತರ ಹೆಣ್ಣು ಮಕ್ಕಳು ಉದ್ಯಮಿಗಳಾಗಲು ತೊಡಗಿಸಕೊಳ್ಳಬೇಕು ಎಂದು ಹೇಳಿದರು

ಉಬುಂಟು, (UBUNTU-consortium of women entrepreneur’s associations)  ಎನ್ನುವ ಮಹಿಳಾ ಉದ್ಯಮಿಗಳ ಸಂಘಟನೆ ಗ್ರೋ ವಿಥ ಟುಗೆದರ್ ಎನ್ನವ ಕಾರ್ಯಕ್ರಮದಲ್ಲಿ   ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಮುರುಗೇಶ್  ನಿರಾಣಿ ಭಾಗವಹಿಸಿ ಉದ್ಘಾಟಿಸಿದರು.

ದೇಶದಲ್ಲಿಂದು ಮಹಿಳೆಯರೇ ನಡೆಸುವಂಥಹ ಉದ್ಯಮಗಳ ಸಂಖ್ಯೆ 13.5 ರಿಂದ 15.7 ದಶಲಕ್ಷವಿದ್ದು,   30 ದಶಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನ ಹಮ್ಮಿಕೊಳ್ಳಲಾಗಿದೆ.  ನೂತನ ಕೈಗಾರಿಕಾ ನೀತಿಯಡಿ ಎಸ್ಸಿ/ಎಸ್ಟಿ, ಮಹಿಳೆಯರು ಸೇರಿದಂತೆ ವಿಶೇಷ ವರ್ಗದ ಉದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹವನ್ನು ಪ್ರಸ್ತಾಪಿಸಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd