ಕಾರವಾರ : ಮೊಬೈಲ್ ಚಾರ್ಜರ್ ಶಾಕ್ ನಿಂದಾಗಿ 4 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ.
ಪೋಷಕರ ನಿರ್ಲಕ್ಷ್ಯದಿಂದಾಗಿ ಮೊಬೈಲ್ ಚಾರ್ಜರ್ನಿಂದ (Mobile Charger) ಮಗುವಿಗೆ ಶಾಕ್ ಹೊಡೆದಿದೆ. ಸಿದ್ದರದಲ್ಲಿನ ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ಎಂಬವರ ಮಗುವೇ ಶಾಕ್ ನಿಂದ ಸಾವನ್ನಪ್ಪಿದೆ. ಮೊಬೈಲ್ ಚಾರ್ಜ್ ಮಾಡಿದ ನಂತರ ಪೋಷಕರು ಪ್ಲಗ್ಅನ್ನು ಆಫ್ ಮಾಡದಿರುವುದರಿಂದಾಗಿ ಮಗು ಅದನ್ನು ಬಾಯಿಗೆ ಹಾಕಿಕೊಂಡಿದೆ. ಇದರಿಂದಾಗಿ ಶಾಕ್ ಹೊಡೆದು ಮಗು ಸಾವನ್ನಪ್ಪಿದೆ. ಈ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








