ಪ್ರೀತಿಗೆ ಯಾವುದೇ ವಯಸ್ಸಾಗಲಿ, ಜಾತಿ, ಧರ್ಮದ ಹಂಗಿಲ್ಲ ಅಂತಾರೆ. ಆದರೆ, ಇಲ್ಲಿ ಶಿಕ್ಷಕಿಯೇ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ.
40 ವರ್ಷದ ಶಿಕ್ಷಕಿ ( teacher) 20 ವರ್ಷದ ವಿದ್ಯಾರ್ಥಿಯನ್ನು (student) ಆಶ್ಚರ್ಯಕರ ರೀತಿಯಲ್ಲಿ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ಸಂಬಂಧದ ಸ್ವರೂಪದ ಕುರಿತು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. @abntelugutv ಮೂಲಕ ‘X’ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದನ್ನು ವೀಡಿಯೊ ತುಣುಕಿನಲ್ಲಿ ತೋರಿಸಲಾಗಿದೆ. ಈ ಘಟನೆ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.








