ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಬಾಲಕ ಸಾವು
ಮಡಿಕೇರಿ: ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಬಾಲಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮದಲ್ಲಿ ನಡೆದಿದೆ.
ಪರ್ಹಾನ್ (12) ಮೃತ ಬಾಲಕ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಪರ್ಹಾನ್ ಬಂದಿದ್ದ. ಬಾಲಕ ಸ್ನಾನಕ್ಕೆ ಎಂದು ಹೊಳೆಗೆ ಇಳಿದ ವೇಳೆ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ.
ರಂಜಾನ್ ಹಬ್ಬಕ್ಕೆಂದು ಪರ್ಹಾನ್ ಕುಶಾಲನಗರ ಸಮೀಪದ ಬೈಲ್ ಕೊಪ್ಪದಿಂದ ಶನಿವಾರಸಂತೆಯಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ. ಮಾವನ ಮಗನೊಂದಿಗೆ ಶನಿವಾರಸಂತೆಯ ಹೆಮ್ಮನೆಯಲ್ಲಿರುವ ಹೊಳೆಯಲ್ಲಿ ಈಜಲು ತೆರಳಿದ್ದರು.
ಈ ಸಂದರ್ಭದಲ್ಲಿ ಹೊಳೆಯ ಬದಿಯ ಕಲ್ಲಿನಲ್ಲಿ ಪಾಚಿ ಕಟ್ಟಿದ್ದರಿಂದ ಕಾಲು ಜಾರಿ ನೀರಲ್ಲಿ ಬಿದ್ದಿದ್ದಾನೆ. ಆಗ ಹೊಳೆಯ ಸುಳಿಗೆ ಸಿಲುಕಿ ಬಾಲಕ ಮೃತಪ್ಪಟ್ಟಿದ್ದಾನೆ.
ನಂತರ ಶನಿವಾರಸಂತೆ ಪೊಲೀಸರು, ಗ್ರಾಮಸ್ಥರು ಪರ್ಹಾನ್ಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ರಾತ್ರಿ ಇಡೀ ಶೋಧ ಕಾರ್ಯ ನಡೆಸಿದ್ದಾರೆ. ಇಂದು ಮುಂಜಾನೆ ಬಾಲಕ ಶವವಾಗಿ ಹೊಳೆ ಪತ್ತೆಯಾಗಿದ್ದಾನೆ. ನಂತರ ಆತನ ಶವವನ್ನು ಹೊಳೆಯಿಂದ ತಗೆಯಲಾಗಿದೆ .ಘಟನೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಬ್ಬದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.