ಚಂಡೀಗಢ: ಇತ್ತೀಚೆಗೆ ಪ್ರೀತಿಗಾಗಿ ಗಡಿ ದಾಟಿ ಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಮತ್ತೊಂದು ಇಂತಹ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್ ಸುದ್ದಿಯಾಗಿದ್ದರು. ಈಗ ಇದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಪಾಕಿಸ್ತಾನದ ಮಹಿಳೆಯೊಬ್ಬರು (Pakistan Women) ಭಾರತಕ್ಕೆ ತಮ್ಮ ಪ್ರಿಯಕರನಿಗಾಗಿ ಬಂದಿದೆ. ಕರಾಚಿಯ ಜವೇರಿಯಾ ಖಾನುಮ್ ಅಮೃತಸರ ಜಿಲ್ಲೆಯ ಅಟ್ಟಾರಿಯಿಂದ ದೇಶಕ್ಕೆ ಆಗಮಿಸಿದ್ದಾರೆ. ಸದ್ಯ ಸಮೀರ್ ಖಾನ್‌ನನ್ನು ಸೇರಿದ್ದಾಳೆ. ಇವರು ಸಮೀರ್‌ನನ್ನು ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ.
ಖಾನುಮ್ ಗೆ 45 ದಿನಗಳ ವೀಸಾ ನೀಡಲಾಗಿದೆ. ಕೊರೊನಾದಿಂದಾಗಿ ಐದು ವರ್ಷ ಅವರಿಗೆ ಅಡ್ಡಿಯಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗುತ್ತೇವೆ ಎಂದು ಮಾಧ್ಯಮಗಳಿಗೆ ಜೋಡಿ ಪ್ರತಿಕ್ರಿಯಿಸಿದೆ.