ಸೆಲ್ಫಿ ತೆಗೆಯುವಾಗ ಎದೆಗೆ ಗುಂಡು ಹಾರಿ ಯುವಕನ ಸಾವು selfie shot himself
ನೋಯ್ಡಾ, ನವೆಂಬರ್09: ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಕಸ್ಮಿಕವಾಗಿ ಪಿಸ್ತೂಲಿನ ಟ್ರಿಗರ್ ಎಳೆದು ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ ದುರಂತ ಘಟನೆ ಉತ್ತರ ಪ್ರದೇಶದ ನೋಯ್ಡಾದಿಂದ ವರದಿಯಾಗಿದೆ.
selfie shot himself
ಮೃತಪಟ್ಟ ಯುವಕನನ್ನು 22 ವರ್ಷದ ಧರ್ಮಪುರ ಗ್ರಾಮದ ನಿವಾಸಿ ಸೌರಭ್ ಮಾವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌರಭ್ ಮಾವಿ ಮತ್ತು ಅವನ ಸ್ನೇಹಿತ ನಕುಲ್ ಶರ್ಮಾ, ಸ್ನೇಹಿತನ ಮದುವೆಗಾಗಿ ಮಾರುತಿ ವಿಟಾರಾ ಬ್ರೆಝಾದಲ್ಲಿ ಸೆಕ್ಟರ್ ಪೈ -3 ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಅದು ಹೇಗೆ ಸಂಭವಿಸಿತು
ಸೌರಭ್ ಮಾವಿ ದಾರಿಯಲ್ಲಿ ಬಂದೂಕನ್ನು ತೆಗೆದುಕೊಂಡು ಸೆಲ್ಫಿಗೆ ಪೋಸ್ ನೀಡಲು ಪ್ರಾರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. ಅವನು, ತಪ್ಪಾಗಿ, ಗನ್‌ನ ಟ್ರಿಗರ್ ಎಳೆದು ಎದೆಗೆ ಗುಂಡು ಹಾರಿಸಿಕೊಂಡನು.
ಆತನ ಸ್ನೇಹಿತ ನಕುಲ್ ಶರ್ಮಾ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ನಂತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಈಶಾನ್ಯ ರಾಜ್ಯಗಳೊಂದಿಗೆ ಇಸ್ರೇಲ್ ನಿಕಟ ಒಡನಾಟವನ್ನು ಬಯಸುತ್ತಿದೆ – ರಾನ್ ಮಲ್ಕಾ
ಗಂಭೀರ ಗಾಯಗಳು ಮತ್ತು ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ” ಎಂದು ಆಸ್ಪತ್ರೆಯ ಪ್ರೊ ಅಜಿತ್ ಕುಮಾರ್ ತಿಳಿಸಿದ್ದಾರೆ.
थाना बिसरख क्षेत्र में युवक द्वारा सेल्फी लेते समय गोली लगने के कारण मृत्यु होने के संबंध में @DCPCentralNoida द्वारा दी गई बाइट।@Uppolice pic.twitter.com/JyLRnk0Ap0
— POLICE COMMISSIONERATE GAUTAM BUDDH NAGAR (@noidapolice) November 7, 2020
ಈ ಪ್ರಕರಣದಲ್ಲಿ ಸಾಕ್ಷಿಯಾಗಿರುವ ನಕುಲ್ ಶರ್ಮಾ ನನ್ನು ಬಿಸ್ರಾಖ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದ ಪೊಲೀಸ್ ಅಧಿಕಾರಿಯೊಬ್ಬರು, ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ