ಚೀನಾ ಗಡಿ ಬಳಿ ನಾಪತ್ತೆಯಾಗಿದ್ದ ಬಾಲಕ ಶೀಘ್ರದಲ್ಲೆ ಭಾರತಕ್ಕೆ ವಾಪಸ್
ಅರುಣಾಚಲ ಪ್ರದೇಶದಿಂದ ಕಾಣೆಯಾದ ಮಿರಾಮ್ ಟ್ಯಾರೋನ್ ಎಂಬ ಬಾಲಕನ ಬಿಡುಗಡೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸಕಾರಾತ್ಮಕ ಸೂಚನೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ಭಾರತ ಚೀನಾ ಗಡಿ ಪ್ರದೇಶದಲ್ಲಿ ಬೇಟೆಯಾಡುವಾಗ ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯ ಜಿಡೋ ಗ್ರಾಮದವರಾದ ಮಿರಾಮ್ ಟ್ಯಾರೋನ್ ಎಂಬ ಬಾಲಕ ಜನವರಿ 18 ರಂದು ನಾಪತ್ತೆಯಾಗಿದ್ದ. A boy who was lost near the China border soon returned to India
ಬಾಲಕನ ನಾಪತ್ತೆಯ ನಂತರ ಅರುಣಾಚಲ-ಪೂರ್ವದ ಬಿಜೆಪಿ ಸಂಸದ ತಪಿರ್ ಗಾವೊ ಅವರು ಟ್ಯಾರೋನ್,ಬಾಲಕನ್ನು ಚೀನಾದ ಪಿಎಲ್‌ಎ ಅಪಹರಿಸಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಸೇನೆಯು ತಕ್ಷಣವೇ ಚೀನಾದ ಕಡೆಯಿಂದ ವ್ಯಕ್ತಿಯನ್ನು ಪತ್ತೆಹಚ್ಚಲು ಪಿ ಎಲ್ ಎ ಸಹಾಯ ಕೇಳಿತು.
ಪಿಎಲ್‌ಎ ಆರ್ಮಿ ಬಾಲಕ ಪತ್ತೆಯಾದ ಬಗ್ಗೆ ದೃಢಪಡಿಸಿದ್ದು, ಅದೇ ಬಾಲಕ ಎಂದು ಗುರುತು ಪತ್ತೆ ಹಚ್ಚಲು ಹೆಚ್ಚಿನ ವಿವರಗಳನ್ನು ಕೋರಿದರು. ಭಾರತೀಯ ಸೇನೆಯು ವೈಯಕ್ತಿಕ ವಿವರಗಳು ಮತ್ತು ಟ್ಯಾರೋನ್ ಅವರ ಪೋಟೋಗಳನ್ನ ಚೀನಾ ಜತೆ ಹಂಚಿಕೊಂಡಿದೆ. ನಂತರ ಸೂಕ್ತ ವಿಧಾನಗಳು ಮುಗಿದ ನಂತರ ಕಳುಹಿಸುವುದಾಗಿ ಹೇಳಿಕೊಂಡಿತ್ತು.