ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹೊಡೆದುಕೊಂದ ಕ್ರೂರಿ ಮಗ
ಆಸ್ತಿಗಾಗಿ ಹೆತ್ತ ತಾಯಿಯನ್ನೆ ಕ್ರೂರಿ ಮಗನೋರ್ವ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
65 ವರ್ಷದ ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ಎಂಬ ಮಹಿಳೆಯೇ ಮೃತ ದುರ್ದೈವಿ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೆ ಕೊಲೆ ಮಾಡಿದ ಮಗ. ಬಸವರಾಜ್ ಕ್ರೂರ ಕೃತ್ಯ ಸ್ಥಳೀಯರಿಗೆ ತಿಳಿದುಬಂದ ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪರಿಣಾಮ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬಸವರಾಜ್ ನಿತ್ಯವೂ ಆಸ್ತಿ ವಿಚಾರದಲ್ಲಿ ಶಾಂತವ್ವನನ್ನು ಪೀಡಿಸಿ ಕಿರುಕುಳ ನೀಡುತ್ತಿದ್ದ. ಇದಕ್ಕೆ ಶಾಂತವ್ವ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಸೋಮವಾರ(ಇಂದು) ಬಸವರಾಜ್ ಮತ್ತೆ ಆಸ್ತಿಗಾಗಿ ಪೀಡಿಸಿದ್ದು, ಜಗಳವಾಡಿಲು ಮುಂದಾಗಿದ್ದಾನೆ, ಈ ವೇಳೆ ಅಲ್ಲೇ ಇದ್ದ ದೊಣ್ಣೆಯಿಂದ ಶಾಂತವ್ವನನ್ನು ಹೊಡೆದು ಕೊಂದಿದ್ದಾನೆ.
Son killed his mother for property issue in Dharwad