ಹೈದರಾಬಾದ್: ಗುಡಿಸಲಿನಲ್ಲಿ ಮಲಗಿದ್ದ ಒಂದು ವರ್ಷದ ಮಗುವನ್ನು ಬೀದಿ ನಾಯಿಗಳು ಕೊಂದು ತಿಂದು ಹಾಕಿರುವ ಘಟನೆಯೊಂದು ನಡೆದಿದೆ.
ಈ ಘಟನೆ ತೆಲಂಗಾಣದ ಸಂಶಾಬಾದ್ ನಲ್ಲಿ ನಡೆದಿದೆ. ಮಗು ತಂದೆಯೊಂದಿಗೆ ಗುಡಿಸಲಿನಲ್ಲಿ (Hut) ಮಲಗಿತ್ತು ಎನ್ನಲಾಗಿದೆ. ಕೆ. ನಾಗರಾಜು (1) ಈ ರೀತಿ ಸಾವನ್ನಪ್ಪಿದ ಮಗು. ಸೂರ್ಯಕುಮಾರ್ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶಂಶಾಬಾದ್‌ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಹಿರಿಯ ಮಗನಾದ ನಾಗರಾಜು ಮತ್ತು 20 ದಿನದ ಮಗುವಿನ ಜೊತೆ ಮಲಗಿದ್ದ. ಈ ಸಂದರ್ಭದಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿವೆ.
ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಂದೆ ಸೂರ್ಯಕುಮಾರ್ ನನ್ನು ಸ್ಥಳೀಯರು ಎಬ್ಬಿಸಿ ಈ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಸೂರ್ಯ ಹೋಗಿ ನೋಡಿದಾಗ ಮಗು ನಾಯಿಗಳ ಪಾಲಾಗಿತ್ತು. ಈ ರೀತಿ ಪ್ರಕರಣ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.