ಕೋಲಾರ : ರಾತ್ರೋರಾತ್ರಿ ಬಂಗಾರಪೇಟೆ ನಗರದ (Bangarpet) ಮಸೀದಿ ಹತ್ತಿರ ಕ್ಲಾಕ್ ಟವರ್ ಮಾದರಿ ನಿರ್ಮಾಣವಾಗಿದ್ದು, ತೆರವುಗೊಳಿಸಲಾಗಿದೆ.
ಈ ವಿವಾದಿತ ಕ್ಲಾಕ್ ಟವರ್ ಮಾದರಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಕೋಲಾರದ ಕ್ಲಾಕ್ ಟವರ್ ಮಾದರಿ ನಿರ್ಮಾಣ ಮಾಡಲಾಗಿತ್ತು. ನ್ಯೂಟೌನ್ ಮಸೀದಿ (New Town Mosque) ಹತ್ತಿರ ಇದನ್ನು ನಿರ್ಮಾಣ ಮಾಡಲಾಗಿದ್ದು, ಟವರ್ ಮಾದರಿ ನಿರ್ಮಿಸಿ ಹಸಿರು ಬಟ್ಟೆ ಸುತ್ತಿದ್ದ ಸ್ಥಳೀಯರು ವಿವಾದಕ್ಕೆ ಗುರಿಯಾಗಿದ್ದರು.
ಈ ಟವರ್ ವಿವಾದ ಸೃಷ್ಟಿಸುವ ಮೊದಲೇ ಸಮಯ ಪ್ರಜ್ಞೆ ಮೆರೆದ ಪೊಲೀಸರು, ತೆರವುಗೊಳಿಸಿದ್ದಾರೆ. ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ತೆರವುಗೊಳಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.